ಉಡುಪಿ, ಮಾ 26 (DaijiworldNews/HR): ಕಾರ್ಮಿಕ ಸಂಘಟನೆಗಳ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ಮತ್ತು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆಯನ್ನು ನಡೆಸಲಾಗುವುದು ಮತ್ತು ಪ್ರತಿಭಟನೆಗೆ ಎಲ್ಲಾ ಸಂಘಗಳ ಸಹಕಾರಗಳಿದೆ ಎಂದು ಜಿಲ್ಲಾ ಕಾರ್ಮಿಕ ಸಂಘಗಳ ಜಿಲ್ಲಾಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸಂಘಟಿತ ಕಾರ್ಮಿಕರಿವೆ ಸಾಮಾಜಿಕ ಭಧ್ರತೆ ಒದಗಿಸುವ ಬದಲಾಗಿ ಅಲ್ಪ ಸ್ವಲ್ಪ ಇರುವ ಕಾನೂನುಗಳನ್ನೂ ಬದಲಾಯಿಸಿ ಅವರ ಕಲ್ಯಾಣಕ್ಕೆ ಇರುವ ಮಂಡಳಿಗಳನ್ನುದುರ್ಬಲಗೊಳಿಸಿ ಕಾರ್ಮಿಕರಿಗೆ ಸಿಗುವ ಸೌಲಬ್ಯಗಳನ್ನು ಸಿಗದಂತೆ ಮಾಡಿರುವುದು ಖಂಡನೀಯ, ಈ ನಿಟ್ಟಿನಲ್ಲಿ ನಮ್ಮ ಬೇಡಿಕೆಗಳನ್ನು ಸರಕಾರ ಈಡೇರಿಸುವಂತೆ ಸೋಮವಾರ ಮತ್ತು ಮಂಗಳವಾರ(ಮಾರ್ಚ್ 28, 29) ಜಿಲ್ಲಾಧಿಕಾರಿ ಕಚೇರಿಯ ಬಳಿ ಪ್ರತಿಭಟನೆಯನ್ನು ನಡೆಸಲಾಗುವುದು ಇದಕ್ಕೂ ಮುನ್ನ ಮಣಿಪಾಲದ ಟೈಗರ್ ಸರ್ಕಲ್ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿಯ ಬಳಿವರೆಗೆ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಆಯಾ ಸಂಘಟನೆಯ ಮುಖಂಡರುಗಳಾದ ಪ್ರಭಾಕರ ಕುಂದರ್, ಸಿ.ಟಿ.ಯುನ ಸಂಚಾಲಕರಾದ ಕೆ ಶಂಕರ್, ಕೆ ರಮೇಶ್, ಸಂಜೀವ ಶೆರೆಗಾರ್, ರವೀಂದ್ರ ಉಪಸ್ಥಿತರಿದ್ದರು.