ಉಡುಪಿ, ಮಾ 26 (DaijiworldNews/HR): ಜಾತ್ಯತೀತ ರಾಷ್ಟ್ರವಾದ ಈ ಭಾರತದ ಸಂವಿಧಾನವು ಅವರವರ ಧರ್ಮದ ಆಚರಣೆಗಳನ್ನು ಮಾಡಲು ಅವಕಾಶವನ್ನು ನೀಡಿದೆ ಎಂದು ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಝೈನುಲ್ ಉಲಮಾ ಎಂ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ಪ್ರಾರಂಭವಾಗಲಿದೆ, ನಂತರದ ದಿನಗಳಲ್ಲಿ ಪದವಿಪೂರ್ವ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಗಳು ನಡೆಯಲಿದೆ. ವಿದ್ಯಾರ್ಥಿನಿಗಳ ಶಿರವಸ್ತ್ರ (ಹಿಜಾಬ್) ಸಮಸ್ಯೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಇನ್ ಶಾ ಅಲ್ಲಾ ತೀರ್ಪು ನಮ್ಮ ಪರವಾಗಿ ಬರುವ ನಿರೀಕ್ಷೆಯಿದೆ. ಯಾವುದೇ ಕಾರಣಕ್ಕೂ ನಮ್ಮ ಸಮುದಾಯ ಶಿಕ್ಷಣದಿಂದ ವಂಚಿತರಾಗಬಾರದು ಎಂದರು.
ಇನ್ನು ಹೆತ್ತವರು ತಮ್ಮ ಮಕ್ಕಳ ಪರೀಕ್ಷೆಯ ವಿಷಯದಲ್ಲಿ ಗಮನಹರಿಸಿ. ಸೂಕ್ಷ್ಮ ವಿಷಯಗಳನ್ನು ದೀರ್ಘ ದ್ರಷ್ಠಿಯಿಂದ ನೋಡಿ, ನಮ್ಮಿಂದಾಗಿ ದೇಶದಲ್ಲಿ ಕೋಮು ಸೌಹಾರ್ದತೆಗೆ ದಕ್ಕೆ ತರಬೇಡಿ. ಜಾತ್ಯತೀತ ರಾಷ್ಟ್ರವಾದ ಈ ಭಾರತದ ಸಂವಿಧಾನವು ಅವರವರ ಧರ್ಮದ ಆಚರಣೆಗಳನ್ನು ಮಾಡಲು ಅವಕಾಶವನ್ನು ನೀಡಿದೆ. ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಮಾಡುವ ತಪ್ಪು ಮಾಹಿತಿಗಳೇ ಇಷ್ಟೊಂದು ಸಮಸ್ಯೆಗಳು ಬಿಗಡಾಯಿಸಲು ಪ್ರಮುಖ ಕಾರಣವೆಂದು ತಿಳಿಸಿದ್ದಾರೆ.