ಮಂಗಳೂರು,ಡಿ 22(MSP): ಸರ್ಕಾರ ಪ್ರಸ್ತಾಪಿಸಿದ್ದ ರಜೆಯ ಪಟ್ಟಿಯಲ್ಲಿ ಕನ್ಯಾ ಮರಿಯಮ್ಮನವರ ಜಯಂತಿ ಕಣ್ತಪ್ಪಿನಿಂದ ಬಿಟ್ಟು ಹೋಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಕನ್ಯಾ ಮರಿಯಮ್ಮನವರ ಜಯಂತಿ 2019 ರಲ್ಲೂ ಸೆ.8 ರಂದು ನಿರ್ಬಂಧಿತ ರಜೆ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.ಅವರು ವಿಧಾನ ಪರಿಷತ್ ನಲ್ಲಿ ಐವನ್ ಡಿ ಸೋಜಾ ಪ್ರಶ್ನೆಗೆ ಉತ್ತರಿಸಿದರು. 2019 ನೇ ಸಾಲಿಗೆ ಸಂಬಂಧಿಸಿದ ಆಯುಕ್ತರು, ಮುಜರಾಯಿ ಇಲಾಖೆ ಪ್ರಸ್ತಾಪಿಸಿದ ರಜಾ ಪಟ್ಟಿಯಲ್ಲಿ ಕನ್ಯಾ ಮರಿಯಮ್ಮನವರ ಜಯಂತಿ ಬಗ್ಗೆ ಉಲ್ಲೇಖವಿರಲಿಲ್ಲ. ಇದು ಕಣ್ತಪ್ಪಿನಿಂದ ಬಿಟ್ಟು ಹೋಗಿರುವುದು ಕಂಡುಬಂದಿದೆ ಹೀಗಾಗಿ ಸೆ.8 ರಂದು ನಿರ್ಬಂಧಿತ ರಜೆ ಎಂದು ಹೆಚ್ಚುವರಿ ಅಧಿ ಸೂಚನೆ ಮುಖಾಂತರ ಹೊರಡಿಸಲು ಕ್ರಮ ಕೈಗೊಳ್ಳಲಾಗುವುದೆಂದು ಉತ್ತರಿಸಿದರು.