ಬೆಂಗಳೂರು,ಡಿ 22(MSP): ಶಾಸಕ ಬಿ.ಸಿ ಪಟೀಲ್ ಗೆ ಸಚಿವ ಸ್ಥಾನ ಪಾಟೀಲ್ ಅವರಿಗೆ ಈ ಬಾರಿಯೂ ಸಚಿವ ಸ್ಥಾನ ಕೈತಪ್ಪಿ ಹೋಗಿದ್ದು, ತೀವ್ರ ಅಸಮಾಧಾನ ಹೊರ ಬಿದ್ದಿದೆ. ಹಿರೇಕೆರೂರು ಕ್ಷೇತ್ರದಲ್ಲಿ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದ, ಬಿ.ಸಿ.ಪಾಟೀಲ್ ಅವರನ್ನು ಪಕ್ಷ ಈ ಬಾರಿಯೂ ಪರಿಗಣಿಸದೆ ಇದ್ದುದಕ್ಕೆ ಅವರ ಪುತ್ರಿ ಸೃಷ್ಠಿ ಪಾಟೀಲ್ ಫೇಸ್ಬುಕ್ ಪೋಸ್ಟ್ನಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
"ಬಿ.ಸಿ.ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡದೇ ಇರುವುದು ನಮ್ಮ ಹಿರೇಕೆರೂರು, ರಟ್ಟೇಹಳ್ಳಿ ತಾಲ್ಲೂಕಿಗೆ ಹಾಗೂ ಬಿ.ಸಿ ಪಾಟೀಲರಿಗೆ ಬಹುದೊಡ್ಡ ಅನ್ಯಾಯ. ಅವರಿಗೆ ಸಚಿವರಾಗಲು ಎಲ್ಲಾ ಅರ್ಹತೆ ಇದ್ದು, ಹಾವೇರಿ ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕರು , ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ ಪಕ್ಷ ನಿಷ್ಠೆಯನ್ನು ತೋರಿಸಿದ ಬಿ.ಸಿ ಪಾಟೀಲರಿಗೆ @INCIndia @INCKarnataka ಕಾಂಗ್ರೆಸ್ ಪಕ್ಷ ಸಚಿವ ಸ್ಥಾನ ನೀಡದೇ ಇರುವುದು ಪಕ್ಷ ನಮ್ಮ ತಾಲ್ಲೂಕಿಗೆ ಹಾಗೂ ಬಿ.ಸಿ ಪಾಟೀಲರಿಗೆ ಮಾಡಿದ ಅನ್ಯಾಯ" ಎಂದು ಪೋಸ್ಟ್ ಮಾಡಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.