ಉಡುಪಿ, ಮಾ 26 (DaijiworldNews/MS): ಉಡುಪಿ ಜಾಮಿಯಾ ಮಸೀದಿ ಬಳಿ ನಿರ್ಮಾಣ ಮಾಡಿದ್ದ ಅಕ್ರಮ ಕಟ್ಟಡವನ್ನು ಉಡುಪಿ ನಗರಸಭೆ ಮಾ.26ರ ಶನಿವಾರ ಬೆಳಗ್ಗೆ ತೆರವುಗೊಳಿಸಿದೆ.
ಎಸ್.ಡಿ.ಪಿ.ಐ ಉಡುಪಿ ಜಿಲ್ಲಾಧ್ಯಕ್ಷ್ಯರ ಮಾಲಿಕತ್ವದ ಹೋಟೆಲ್ ಕಟ್ಟಡ ಇದಾಗಿದ್ದು, ಕಳೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಅಕ್ರಮ ಕಟ್ಟಡ ತೆರವುಗೊಳಿಸುವ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಈ ಹಿನ್ನಲೆಯಲ್ಲಿ ಭಾರೀ ಪೊಲೀಸ್ ಭದ್ರತೆಯೊಂದಿಗೆ ಬೆಳ್ಳಂಬೆಳ್ಳಗೆ ಕಾರ್ಯಾಚರಣೆಗೆ ಇಳಿದ ನಗರಸಭೆಯೂ ಅಕ್ರಮ ಕಟ್ಟಡವನ್ನು ತೆರವುಗೊಳಿಸಿದೆ.
ತೆರವು ಕಾರ್ಯಾಚರಣೆ ವೇಳೆ ಈ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದ್ದು, ನಗರಸಭಾ ಕಮಿಷನರ್, ಉಡುಪಿ ತಹಶೀಲ್ದಾರ್, ಉಡುಪಿ ನಗರ ಠಾಣಾ ಎಸ್ ಐ ಪ್ರಮೋದ್ ಕುಮಾರ್ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿದ್ದರು.
ಎರಡು ಬುಲ್ಡೋಜರ್, ಒಂದು ಕ್ರೇನ್, ಲಾರಿ ಬಳಸಿ ಕಾರ್ಯಾಚರಣೆ ನಡೆಸಲಾಗಿದ್ದು ,ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಆ್ಯಂಬುಲೆನ್ಸ್ ನಿಯೋಜನೆ ಮಾಡಲಾಗಿತ್ತು.