ಮಂಗಳೂರು, ಮಾ 25 (DaijiworldNews/MS): ಕನ್ಯಾಡಿಯ ದಿನೇಶ್ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಬಿಜೆಪಿ ಮುಖಂಡ ಡಿ.ಕೃಷ್ಣ ಎಂಬಾತನಿಗೆ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಆರೋಪಿ ಡಿ.ಕೃಷ್ಣ, ಮೃತ ದಿನೇಶ್
ಘಟನೆಯ ವಿವರ:
ಕೃಷ್ಣನ ಜಮೀನಿನ ದಾಖಲೆಗಳನ್ನು ತಾನು ಮಾಡಿಕೊಟ್ಟಿರುವುದಾಗಿ ಮೃತ ದಿನೇಶ್ ಸಾರ್ವಜನಿಕವಾಗಿ ಹೇಳಿದ್ದ ಎಂಬ ಕೋಪದಲ್ಲಿ ಆರೋಪಿ ಕೃಷ್ಣ, ದಿನೇಶ್ ಹೊಟ್ಟೆಗೆ ಕೈಯಿಂದ ಗುದ್ದಿ, ಕಾಲಿನಿಂದ ತುಳಿದು ಹಲ್ಲೆ ಮಾಡಿದ್ದ. ಫೆ.23ರಂದು ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಫೆ.24ರಂದು ಹಲ್ಲೆಗೊಳಗಾದ ದಿನೇಶ್ ಅಸ್ವಸ್ಥನಾಗಿದ್ದು ಈ ಹಿನ್ನಲೆಯಲ್ಲಿ ಆತನ ಮನೆಯವರು, ಕೃಷ್ಣನ ಬಳಿ ಹೋಗಿ ದಿನೇಶ್ ಗೆ ಹೊಡೆದಿರುವ ನೀನೇ ಆಸ್ಪತ್ರೆಗೆ ದಾಖಲಿಸುವಂತೆ ತಾಕೀತು ಮಾಡಿದ್ದಾರೆ. ಇದಕ್ಕೆ ಸಮ್ಮತಿಸಿದ ಆರೋಪಿ, ಆತನನ್ನು ಮೆಟ್ಟಿಲಿನಿಂದ ಬಿದ್ದಿದ್ದಾನೆ ಎಂದು ಸುಳ್ಳು ಹೇಳಿ ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾನೆ.
ಆದರೆ ಚಿಕಿತ್ಸೆ ಫಲಿಸದೆ ದಿನೇಶ್ ತಡರಾತ್ರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಮರುದಿನ ದಿನೇಶ್ ತಾಯಿ ಪದ್ಮಾವತಿ ಮಗನದ್ದು ಕೊಲೆ ಎಂದು ಆರೋಪಿಸಿ ಧರ್ಮಸ್ಥಳ ಠಾಣೆಯಲ್ಲಿ ಹಲ್ಲೆ ನಡೆಸಿದ ಡಿ.ಕೃಷ್ಣ ವಿರುದ್ಧ ದೂರು ದಾಖಲಿಸಿದ್ದರು
. ಹೀಗೆ ಹಲ್ಲೆಗೊಳಗಾದ ದಿನೇಶ್ ಹಣವಿಲ್ಲದೆ ಚಿಕಿತ್ಸೆಗೆ ಹೋಗದೆ ಮನೆಯಲ್ಲೇ ನರಳಾಡಿದ್ದ.ಫೆ.24ರಂದು ಹಲ್ಲೆಗೊಳಗಾದ ದಿನೇಶ್ ಮನೆಯವರು, ಕೃಷ್ಣನ ಬಳಿ ಹೋಗಿ ಆತನಿಗೆ ಹೊಡೆದಿರುವ ನೀನೇ ಆಸ್ಪತ್ರೆಗೆ ದಾಖಲಿಸುವಂತೆ ತಾಕೀತು ಮಾಡಿದ್ದಾರೆ. ಇದಕ್ಕೆ ಸಮ್ಮತಿಸಿದ ಆರೋಪಿ, ಆತನನ್ನು ಮೆಟ್ಟಿಲಿನಿಂದ ಬಿದ್ದಿದ್ದಾನೆ ಎಂದು ಸುಳ್ಳು ಹೇಳಿ ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾನೆ.ಚಿಕಿತ್ಸೆ ಫಲಿಸದೆ ದಿನೇಶ್ ತಡರಾತ್ರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಮರುದಿನ ದಿನೇಶ್ ತಾಯಿ ಪದ್ಮಾವತಿ ಮಗನದ್ದು ಕೊಲೆ ಎಂದು ಆರೋಪಿಸಿ ಧರ್ಮಸ್ಥಳ ಠಾಣೆಯಲ್ಲಿ ಹಲ್ಲೆ ನಡೆಸಿದ ಡಿ.ಕೃಷ್ಣ ವಿರುದ್ಧ ದೂರು ದಾಖಲಿಸಿದ್ದರು.
ಅದರಂತೆಯೇ ಧರ್ಮಸ್ಥಳ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿತ್ತು. ಕನ್ಯಾಡಿಯ ದಿನೇಶ್ ಕೊಲೆ ಪ್ರಕರಣ ವಿಚಾರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ದ ಕಿಡಿಕಾರಿತ್ತು. ಇತ್ತೀಚೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮೃತ ದಿನೇಶ್ ಮನೆಗೆ ತೆರಳಿ ಸಾಂತ್ವಾನ ಹೇಳಿದ್ದರು.