ಮಂಗಳೂರು, ಮಾ. 23 (DaijiworldNews/SM): ದೇವಸ್ಥಾನಗಳಲ್ಲಿ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ ನೀಡದ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ವಿಹೆಚ್ ಪಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಬಪ್ಪ ಬ್ಯಾರಿಯ ಬಗ್ಗೆ ನಮಗೆ ತಿಳಿದಿದ್ದು, ನಾವು ಅವರ ಮೇಲೆ ಗೌರವ ಹೊಂದಿದ್ದೇವೆ ಎಂದು ವಿಹೆಚ್ ಪಿ ಮುಖಂಡ ಶರಣ್ ಪಂಪ್ ವೆಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರಾಣಗಳಲ್ಲಿರುವ ಬಪ್ಪ ಬ್ಯಾರಿ ಕಥೆ ನಮಗೆ ಗೊತ್ತಿದೆ. ಬಪ್ಪ ಬ್ಯಾರಿಗೆ ಗೌರವ ಕೊಟ್ಟು ಇವತ್ತೂ ಯಕ್ಷಗಾನ ಮಾಡುತ್ತೇವೆ. ಬಪ್ಪ ಬ್ಯಾರಿಯ ಬಗ್ಗೆ ಯಕ್ಷಗಾನದಲ್ಲಿ ಹೇಳಿದ್ದೇವೆ. ಅವರಿಗೆ ಯಾವ ಗೌರವ ನೀಡಬೇಕು ಅದನ್ನು ನಾವು ನೀಡಿದ್ದೇವೆ. ಹಾಗಂತ ಯಾರೋ ಬಂದು ನಾನು ಬಪ್ಪ ಬ್ಯಾರಿ ಕುಟುಂಬದವನು ಎಂದರೆ ಅದನ್ನು ನಾವು ಒಪ್ಪುವುದಿಲ್ಲ ಎಂದು ಶರಣ್ ಪಂಪ್ ವೆಲ್ ತಿಳಿದಿದ್ದಾರೆ.