ಉಡುಪಿ, ಮಾ 23 (DaijiworldNews/HR): ಭಾರತದ ಚಲನಚಿತ್ರ ಉದ್ಯಮದಲ್ಲಿ ವಿಫುಲ ಉದ್ಯೋಗವಕಾಶಗಳಿದ್ದು, ಪ್ರತಿ ವರ್ಷ 10,000 ದಿಂದ 20,000 ದವರೆಗೆ ಚಲನಚಿತ್ರ ಕ್ಷೇತ್ರದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳ ಅವಶ್ಯಕತೆಯಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯ ಅಶೋಕ್ ಕಶ್ಯಪ್ ಹೇಳಿದರು.
ಈ ಕುರಿತು ಮಾತನಾಡಿದ ಅವರು, ಹಿಂದೆ ಚಲನಚಿತ್ರ ಉದ್ಯಮದಲ್ಲಿ ಪರಿಣಿತರನ್ನು ತಯಾರುಮಾಡಲು ಹಲವು ವರ್ಷಗಳು, ಬೇಕಿದ್ದವು ಆದರೆ ಇಂದು ತಾಂತ್ರಿಕತೆ ಮತ್ತು ಈ ಕ್ಷೇತ್ರದಲ್ಲಿ ಅನುಭವ ಹೊಂದಿದ ಪರಿಣಿತರಿಂದ ತರಬೇತಿಗಳು ದೊರೆಯುತ್ತಿರುವುದರಿಂದ ಉತ್ತಮ ಪರಿಣಿತರು ಸೃಷ್ಟಿಯಾಗುತ್ತಿದ್ದಾರೆ ಅಲ್ಲದೆ ಹಲವು ಕಾಲೇಜುಗಳು ಮತ್ತು ವಿಶ್ವ ವಿದ್ಯಾಲಯಗಳು ಸಶ್ವಿನ್ನು ಒಂದು ಕೋಸ್ ಆಗಿ ಭೋಧಿಸುತ್ತಿವೆ ಎಂದರು.
ಚಲನಚಿತ್ರ ನಿರ್ಮಾಣದಲ್ಲಿ ಅನಿಮೇಶನ, ಗ್ರಾಫಿಕ್ಸ್, ಉತ್ತಮ ಗುಣಮಟ್ಟದ ವೀಡಿಯೋಗಳು ಮತ್ತು ಈ ವಿಭಾಗಗಳಲ್ಲಿ ತಂತ್ರಜ್ಞರು ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರಾಗಿದ್ದು, ಇವರು ವಿದೇಶಗಳಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ವಿದೇಶಿ ಚಲನಚಿತ್ರಗಳ ನಿರ್ದೇಶಕರು ಮತ್ತು ನಿರ್ಮಾಪಕರು ತಮ್ಮ ಚಿತ್ರ ನಿರ್ಮಾಣದ ತಾಂತ್ರಿಕ ಕಾರ್ಯಗಳನ್ನು ಭಾರತದಲ್ಲಿ ಮಾಡುತ್ತಿದ್ದಾರೆ. ಚಲನಚಿತ್ರ ಕ್ಷೇತ್ರದ ವಿದ್ಯಾರ್ಥಿಗಳು ಚಿತ್ರ ನಿರ್ಮಾಣದ ಕೌಶಲಗಳನ್ನು ಅರಿಯುವುದು ಅತ್ಯಂತ ಅಗತ್ಯ ಎಂದರು.
ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ, ಮೈಸೂರು ನಲ್ಲಿ ಫಿಲಂ ಸಿಟಿ ನಿರ್ಮಾಣ, ಕರ್ನಾಟಕದ ಎಲ್ಲಾ ಭಾಷೆಗಳ ಹಳೆಯ ಚಲನಚಿತ್ರಗಳನ್ನು ಡಿಜಿಟಲ್ ರೂಪದಲ್ಲಿ ಸಂರಕ್ಷಿಸುವ ಕಾರ್ಯ ಮಾಡಲು ಸರಕಾರವನ್ನು ಕೋರಲಾಗಿದೆ, ಕನ್ನಡದಲ್ಲೂ ಸಹ ಓಟಿಟಿ ಆರಂಭಿಸುವುದು ಅಗತ್ಯವಿದೆ ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ, ಎಂ.ಐಸಿ ಮಣಿಪಾಲದ ನಿರ್ದೇಶಕಿ ಡಾ.ಪದ್ಮಾರಾಣಿ, ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯ ಶ್ರೀರಾಜ್ ಗುಡಿ , ಮಣಿಪಾಲ ಪ್ರಸಾರ ವಿಭಾಗದ ಶುಭಾ ಉಪಸ್ಥಿತರಿದ್ದರು.