ಬಂಟ್ವಾಳ, ಮಾ 23 (DaijiworldNews/HR): ಮಾರುತಿ ಅಲ್ಟೋ ಕಾರು ರಸ್ತೆ ಬಿಟ್ಟು ಸುಮಾರು ಹತ್ತು ಅಡಿ ಆಳಕ್ಕೆ ಬಿದ್ದ ಘಟನೆ ಬಂಟ್ವಾಳ ಬೈಪಾಸ್ ರಸ್ತೆಯಲ್ಲಿ ಇಂದು ಮಧ್ಯಾಹ್ನ ವೇಳೆ ನಡೆದಿದೆ.
ಬಾಲಕ ಸುವಿದ್(5) ಎಂಬಾತನಿಗೆ ಗಾಯವಾಗಿದ್ದು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಕಾರಿನಲ್ಲಿ ಒಟ್ಟು ನಾಲ್ಕು ಮಂದಿ ಪ್ರಯಾಣಿಸುತ್ತಿದ್ದು ಬೈಪಾಸ್ ಕೆಂಪುಗುಡ್ಡೆ ಕ್ರಾಸ್ ನ ಎದುರುಗಡೆ ರಸ್ತೆಯ ಬದಿಯಲ್ಲಿ ಇದ್ದ ವಿದ್ಯುತ್ ತಂತಿ ಕಂಬಕ್ಕೆ ಕಾರು ಢಿಕ್ಕಿ ಹೊಡೆದು ಬಳಿಕ ಗುಂಡಿಗೆ ಪಲ್ಟಿಯಾಗಿ ಬಿದ್ದಿದೆ.
ಗಿರೀಶ್ ಎಂಬವರಿಗೆ ಸೇರಿದ ಕಾರು ಇದಾಗಿದ್ದು ಇಬ್ಬರು ಮಕ್ಕಳು ಸಹಿತ ಪಟ್ಟು ನಾಲ್ಕು ಮಂದಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.