ಕಾಸರಗೋಡು, ಮಾ 23 (DaijiworldNews/MS): ಹಲವು ಪ್ರಕರಣಗಳಲ್ಲಿ ಶಾಮೀಲಾಗಿದ್ದ ನಾಲ್ಕು ಮಂದಿಯನ್ನು ಬಂಧಿಸಿದ ಮಂಜೇಶ್ವರ ಪೊಲೀಸರು ಇವರ ವಿರುದ್ಧ ಕಾಫಾ ಕಾಯ್ದೆ (ಗೂಂಡಾ ಕಾಯ್ದೆ) ಹೂಡಿದ್ದಾರೆ.
ಮಂಜೇಶ್ವರ ಠಾಣಾ ವ್ಯಾಪ್ತಿಯ ಕಡಂಬಾರ್ ಮೊರತ್ತಣೆಯ ಮುಹಮ್ಮದ್ ಅಸ್ಗರ್(24),ಮೀಯಪದವಿನ ಇಬ್ರಾಹಿಂ ಅರ್ಷಾದ್ ( 26) ಉಪ್ಪಳದ ರೌಫ್ (41) ಮತ್ತು ದೀಪಕ್ (36) ಎಂಬವರನ್ನು ಬಂಧಿಸಲಾಗಿದೆ.
ಅಸ್ಗರ್ ವಿರುದ್ಧ ದರೋಡೆ , ಕೊಲೆಯತ್ನ , ಮಾದಕವಸ್ತು ಸಾಗಾಟ , ಗುಂಡು ಹಾರಾಟ ನಡೆಸಿದ , ಅರ್ಷಾದ್ ವಿರುದ್ಧ ಕೊಲೆ , ಗುಂಡು ಹಾರಾಟ ಸೇರಿದಂತೆ ಕುಂಬಳೆ , ಮಂಜೇಶ್ವರ ಠಾಣೆ ಯಲ್ಲಿ ಏಳಕ್ಕೂ ಅಧಿಕ ಪ್ರಕರಣಗಳಿವೆ. ರೌಫ್ ಹಲವು ಕಳವು ಪ್ರಕರಣಗಳ ಆರೋಪಿಯಾಗಿದ್ದು , ದೀಪಕ್ ವಿರುದ್ಧ ಕೊಲೆಯತ್ನ , ಮದ್ಯ ಸಾಗಾಟ ಪ್ರಕರಣಗಳು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಎಲ್ಲಾ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ