ನವದೆಹಲಿ, ಡಿ 21(SM): ತನಿಖಾ ಸಂಸ್ಥೆಗಳಿಗೆ ಕಂಪ್ಯೂಟರ್ಗಳಲ್ಲಿರುವ ಮಾಹಿತಿಗಳನ್ನು ಪರಿಶೀಲಿಸುವ ಅಧಿಕಾರ ನೀಡಿರುವ ಕೇಂದ್ರ ಸರ್ಕಾರದ ವಿರುದ್ಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು 'ಪೊಲೀಸ್ ರಾಜ್ಯ'ವನ್ನಾಗಿಸಲು ಹೊರಟಿರುವ 'ಅಭದ್ರತೆಯ ಸರ್ವಾಧಿಕಾರಿ' ಎಂದು ಟೀಕಿಸಿದ್ದಾರೆ.
ಕೇಂದ್ರದ ಹತ್ತು ಸಂಸ್ಥೆಗಳಿಗೆ ಯಾವುದೇ ಕಂಪ್ಯೂಟರ್ ನಲ್ಲಿ ಸಂಗ್ರಹಿಸಿದ ಮಾಹಿತಿ ಮೇಲೆ ನಿಗಾ ಇಡಲು ಅಧಿಕಾರ ನೀಡಲಾಗಿದೆ. 10 ಕೇಂದ್ರ ಸಂಸ್ಥೆಗಳಿಗೆ ವಿಶೇಷ ಅಧಿಕಾರ, ಕಂಪ್ಯೂಟರ್ ಮಾಹಿತಿಗಳಿಗೂ ಕೈ ಇಡಬಹುದು ಇದೇ ಮೊದಲ ಬಾರಿಗೆ ದತ್ತಾಂಶವನ್ನು ಸ್ಕ್ಯಾನಿಂಗ್ ಮಾಡುವ ಅಧಿಕಾರವನ್ನು ವಿವಿಧ ಸಂಸ್ಥೆಗಳಿಗೆ ನೀಡಲಾಗಿದೆ. ಇದಕ್ಕೂ ದತ್ತಾಂಶಗಳು ಹಾಗೆ ನಿಗಾ ಮಾಡುವಂಥ ಅಧಿಕಾರ ಇರಲಿಲ್ಲ. ಆದರೆ ಈಗ ದತ್ತಾಂಶವನ್ನು ಪರಿಶೀಲಿಸಬಹುದು.
ಈಗಾಗಲೇ ಸಂಗ್ರಹಿಸಿದ ಹಾಗೂ ಸೃಷ್ಟಿಸಿದ ಮಾಹಿತಿಯನ್ನು ಕೂಡ ತನಿಖೆ ಮಾಡುವಂತಹ ಹಾಗೂ ಅವುಗಳನ್ನು ವಶಕ್ಕೆ ಪಡೆಯುವಂತಹ ಅಧಿಕಾರ ಕೂಡ ನೀಡಲಾಗಿದೆ. ಅಭದ್ರತೆಯ ಸರ್ವಾಧಿಕಾರಿ ಮೋದಿ ಜೀ. ಇದು ನೂರು ಕೋಟಿಗೂ ಅಧಿಕ ಸಂಖ್ಯೆಯ ಭಾರತೀಯರಿಗೆ ನೀವು ನಿಜಕ್ಕೂ ಎಂತಹ ಅಭದ್ರತೆಯ ಸರ್ವಾಧಿಕಾರಿ ಎಂಬುವುದನ್ನು ಸಾಬೀತುಪಡಿಸುತ್ತದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮೂಲಕ ಟೀಕಿಸಿದ್ದಾರೆ.