ಮಂಗಳೂರು, ಮಾ 23 (DaijiworldNews/MS): ದೇಶಾದ್ಯಂತ ಎಲ್ಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ 60 ಕಿ. ಮೀ. ವ್ಯಾಪ್ತಿಯೊಳಗೆ ಎರಡು ಟೋಲ್ ಬೂತ್ಗಳಿದ್ದರೆ ಒಂದನ್ನು ಮೂರು ತಿಂಗಳಿನಲ್ಲಿ ಮುಚ್ಚಲಾಗುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. 2022-23ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಅನುದಾನದ ಬೇಡಿಕೆಗಳ ಕುರಿತು ಲೋಕಸಭೆಯಲ್ಲಿ ಉತ್ತರಿಸಿದ ಗಡ್ಕರಿ 60 ಕಿ. ಮೀ. ವ್ಯಾಪ್ತಿಯಲ್ಲಿ ಕೇವಲ ಒಂದು ಟೋಲ್ ಬೂತ್ ಇರಬೇಕು. ಎರಡು ಟೋಲ್ ಬೂತ್ ಇರುವ ಕಡೆ ಅವುಗಳನ್ನು ಮುಂದಿನ 3 ತಿಂಗಳಲ್ಲಿ ಮುಚ್ಚಲಾಗುವುದು ಎಂದು ಹೇಳಿದ್ದಾರೆ.
ಈ ಹಿನ್ನಲೆಯಲ್ಲಿ ಇದೀಗ ಸುರತ್ಕಲ್ ಎನ್ಐಟಿ ಕೆ ಸಮೀಪದ ಟೋಲ್ ಗೇಟ್ ಕೂಡಾ ರದ್ದಾಗಬೇಕು ಎಂದು ಬೇಡಿಕೆ ಈಡೇರುವ ನಿರೀಕ್ಷೆ ಮೂಡಿದೆ.
ಹೆಜಮಾಡಿ ಟೋಲ್ ನಿಂದ ಕೇವಲ ಕೆಲವು ಕಿ.ಮೀ ದೂರದಲ್ಲಿ ಸುರತ್ಕಲ್ ಎನ್ ಐಟಿಕೆ ಟೋಲ್ ಕೇಂದ್ರ ಇದ್ದು , ಇಲ್ಲೂ ಟೋಲ್ ಸಂಗ್ರಹಿಸುವುದನ್ನು ಸಾರ್ವಜನಿಕರು ಕೆಲವು ಸಮಯದಿಂದ ವಿರೋಧಿಸುತ್ತಿದ್ದಾರೆ. ಹಲವಾರು ಬಾರಿ ಪ್ರತಿಭಟನೆಗಳು ನಡೆದಿದ್ದವು. ಸಂಸದ ನಳಿನ್ ಕೂಡಾ ಕಳೆದ ವಾರವಷ್ಟೇ ಈ ಟೋಲ್ ಗೇಟ್ ರದ್ದು ಮಾಡುವಂತೆ ಮಂಗಳೂರಿನ ಸಭೆಯೊಂದರಲ್ಲಿ ಒತ್ತಾಯಿಸಿದ್ದರು.
ಇದೀಗ ಗಡ್ಕರಿ ಅವರು ಈ ಮಾಹಿತಿಯನ್ನು ಆಧರಿಸಿ ದೇಶದಾದ್ಯಂತ ಇಂತಹ ಕನಿಷ್ಟ ಅಂತರದ ಎಲ್ಲಾ ಟೋಲ್ ಕೇಂದ್ರಗಳು ಕೂಡಾ ರದ್ದಾಗಳಿವೆ.