ಮಂಗಳೂರು, ಮಾ. 22(DaijiworldNews/SM): ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಪುಷ್ಪಾ ಅಮರ್ ನಾಥ್ ಪ್ರತಿಕ್ರಿಯೆ ನೀಡಿದ್ದಾರೆ. ಅದೆಷ್ಟೋ ಮಂದಿ ಹತ್ಯೆಯಾಗಿದೆ ನ್ಯಾಯ ಸಿಕ್ಕಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಒಬ್ಬರಿಗೆ ಒಂದು ನ್ಯಾಯ ಇನ್ನೊಬ್ಬರಿಗೆ ಒಂದು ನ್ಯಾಯ ಎನ್ನುವ ರೀತಿಯಾಗಿದೆ. ಬೆಳ್ತಂಗಡಿಯ ಯುವಕನ ಸಾವಿಗೆ ಪರಿಹಾರ ಕಡಿಮೆ ಯಾಕೆ ನೀಡಿದ್ದೀರಿ? ಬೆಳ್ತಂಗಡಿಯಲ್ಲಿ ನಡೆದ ಯುವಕನ ಕೊಲೆಗೂ ನ್ಯಾಯ ಇಲ್ಲ. ಸರ್ಕಾರ ಈ ಯುವಕನಿಗೆ ಎಂಟು ಲಕ್ಷ ಪರಿಹಾರ ಘೋಷಿಸಿದೆ. ಇಲ್ಲೂ ಬಿಜೆಪಿ ತಾರತಮ್ಯ ದೋರಣೆ ತೋರಿದೆ. ಹರ್ಷ ಕೊಲೆಯ ವೇಳೆ 25 ಲಕ್ಷ ಪರಿಹಾರ ಘೋಷಿಸಿದೆ. ಬೆಳ್ತಂಗಡಿ ಮೃತ ಪಟ್ಟ ಯುವಕನ ಪತ್ನಿ, ತಾಯಿಗೆ ನ್ಯಾಯ ಬೇಕಿದೆ ಎಂದು ಆಗ್ರಹಿಸಿದ್ದಾರೆ.
ಮಾಹಿಳಾ ಕಾಂಗ್ರೆಸ್ ವತಿಯಿಂದ ಜಿಲ್ಲಾಧಿಕಾರಿ ಭೇಟಿ ನೀಡುತ್ತೇವೆ. ನ್ಯಾಯಕ್ಕಾಗಿ ಜಿಲ್ಲಾಧಿಕಾರಿ ಭೇಟಿ ನೀಡಲಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಪುಷ್ಪಾ ಅಮರ್ ನಾಥ್ ತಿಳಿಸಿದ್ದಾರೆ.