ಮಂಗಳೂರು, ಮಾ 22 (DaijiworldNews/MS): ಮುಂದಿನ ಎರಡು ತಿಂಗಳುಗಳ ಕಾಲ ಕುಡಿಯುವ ನೀರಿನ ಬೇಡಿಕೆ ಹೆಚ್ಚಾಗುವ ಸಾಧ್ಯತೆಯಿರುವುದರಿಂದ ನೀರು ವಿತರಣೆ ಸವಾಲು ಮನಪಾ ದ ಮುಂದೆ ಇದ್ದು ನಿಗಾ ಇಡಲಾಗುತ್ತದೆ ಎಂದು ಮ.ನ.ಪಾ ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಹೇಳಿದರು.
ಮಂಗಳೂರು ಮ.ನಪಾ.ಗೆ ಕುಡಿಯುವ ನೀರು ಸರಬರಾಜು ಮಾಡುವ ನೇತ್ರಾವತಿ ನದಿಯ ತುಂಬೆ ವೆಂಟೆಡ್ ಡ್ಯಾಂ ನಲ್ಲಿ ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಧಾರ್ಮಿಕ ವಿಧಿವಿಧಾನಗಳ ಗಂಗಾಪೂಜೆ ಬಳಿಕ ಬಾಗಿನ ಅರ್ಪಣೆ ಮಾಡಿ ಮಾತನಾಡಿದರು.
ಕಳೆದ ಎರಡು ವರ್ಷಗಳಿಂದ ಕೋವಿಡ್ ಮಾಹಮಾರಿಯಿಂದ ಇಡೀ ಜಿಲ್ಲೆ ಸ್ತಬ್ದವಾಗಿದ್ದ ಹಿನ್ನೆಲೆಯಲ್ಲಿ ಬೇಸಿಗೆ ಕಾಲದಲ್ಲಿ ಮಂಗಳೂರು ಮ.ನ.ಪಾಗೆ ಕುಡಿಯುವ ನೀರಿನ ಸಮಸ್ಯೆ ಆಗಿಲ್ಲ, ಆದರೆ ಈ ಬಾರಿ ಬೇಸಿಗೆ ಕಾಲದಲ್ಲಿ ಎಪ್ರಿಲ್ ಮೇ ನಲ್ಲಿ ನೀರಿನ ಬೇಡಿಕೆ ಹೆಚ್ಚಾಗುವ ಸಾಧ್ಯತೆಯಿದೆ, ಹಾಗಾಗಿ ನೀರಿನ ಅಭಾವ ವಾಗುವ ಸಾಧ್ಯತೆ ಗಳಿವೆ ಆದರೆ ಈಗಾಗಲೇ ಅದಕ್ಕೆ ಪೂರ್ವಯೋಜಿತವಾಗಿ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು, ಎರಡರಿಂದ ಮೂರು ತಿಂಗಳುಕಾಲ ನೀರಿನ ಶೇಖರಣೆ ಇದೆ ಆದರೂ ಮುಂಜಾಗೃತ ಕ್ರಮವಾಗಿ ನೀರಿನ ಅಧ್ಯತೆಯ ಮೇಲೆ ಮಿತವಾಗಿ ನೀರಿನ ಬಳಕೆ ಮಾಡಿ ,ಕುಡಿಯುವ ನೀರಿನ ಹೊರತು ಇತರ ಖರ್ಚಿಗಾಗಿ ಬೇರೆ ಮೂಲಗಳನ್ನು ಅವಲಂಬಿಸಿ ಎಂದು ಅವರು ಮನವಿ ಮಾಡಿದರು.
ಅಮೃತ್ ಯೋಜನೆ ಯ ಒಂದು ಹಂತದ ಕಾಮಗಾರಿ ಮೂರು ತಿಂಗಳಲ್ಲಿ ಲೋಕಾರ್ಪಣೆ ಮಾಡಲಾಗುತ್ತದೆ, 10 ಎಮ್.ಎಲ್.ಡಿ ಯಿಂದ 20 ಎಂ.ಎಲ್ ಡಿ ಗೆ ಮೇಲ್ದರ್ಜೆಗೆ ಏರಿಸಲಾಗುತ್ತದೆ. ಇದು ಪೂರ್ತಿಯಾದ ಬಳಿಕ 10 ಎಂ.ಎಲ್.ಡಿ ಹೆಚ್ಚುವರಿ ನೀರು ನಗರ ಭಾಗಕ್ಕೆ ಸಿಗುತ್ತದೆ.800 ಕೋಟಿ ವೆಚ್ಚದಲ್ಲಿ ಜಯಶ್ರೀ ಯೋಜನೆ ಯಡಿಯಲ್ಲಿ ವಿವಿಧ ಕಾಮಗಾರಿಗಳು ವೇಗ ಪಡೆದುಕೊಂಡಿದೆ.ಈ ಎಲ್ಲಾ ಕಾಮಗಾರಿಗಳು ಪೂರ್ತಿಯಾದರೆ ಶುದ್ದ ಕುಡಿಯುವ ನೀರು ಪೂರೈಕೆಯಾಗುತ್ತದೆ.ತುಂಬೆ ಅಣೆಕಟ್ಟಿನಿಂದ ವರ್ಷಪೂರ್ತಿ ಕುಡಿಯುವ ನೀರು ಸರಬರಾಜು ಆಗುತ್ತದೆ ಎಂದು ಹೇಳಿದರು.
ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮಾತನಾಡಿ, ಜಗತ್ತಿನ ಎಲ್ಲಾ ಕಡೆಗಳಲ್ಲಿ ಪಕೃತಿಯ ಅದ್ಬುತ ಕೊಡುಗೆಗಾಗಿ ಪೂಜೆ ಮಾಡಲಾಗುತ್ತಿದೆ. ಜಲಸಂಪತ್ತುನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿ ಮನೆಯಲ್ಲೂ ಪೂಜೆ ನಡೆಯಬೇಕಾಗಿದೆ ಎಂದು ಅವರು ಹೇಳಿದರು. ಪ್ರತಿ ಮನೆಯಲ್ಲೂ ನೀರು ಇಂಗಿಸುವ ಕಾರ್ಯ ನಡೆಯಬೇಕು ಅ ಮೂಲಕ ಜಲಸಮೃದ್ದಿಗಾಗಿ ಕಾರ್ಯ ಪವೃತ್ತರಾಗಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಉಪಮೇಯರ್ ಸುಮಂಗಳ ರಾವ್,ಕಾರ್ಪೋರೆಟ್ ಗಳಾದ ದಿವಾಕರ ಪಾಂಡೇಶ್ವರ ಶಶಿಧರ ಹೆಗ್ಡೆ, ಭಾಸ್ಕರ ಕೆ, ಲೀಲಾವತಿ ಪ್ರಕಾಶ್, ಗಣೇಶ್ ಕುಲಾಲ್, ಮನೋಹರ್ ಕದ್ರಿ, ಕಿರಣ್ ಕೋಡಿಕಲ್, ಸುದೀರ್ ಶೆಟ್ಟಿ ಕಣ್ಣೂರು, ಶೋಭಾರಾಜೇಶ್, ಲೋಕೇಶ್, ಮನೋಜ್,ಕಿಶೋರ್ ಕೊಟ್ಟಾರಿ, ರಂಜಿನಿ ಕೋಟ್ಯಾನ್, ಶಕೀಲಾ ಕಾವ, ರೂಪ ಶ್ರೀ , ಜಯಶ್ರೀ ಕುಡ್ವ, ಸಂದೀಪ್ ಗರೋಡಿ,ವೀಣಾ ಮಂಗಳ , ಜಗದೀಶ್ ಶೆಟ್ಟಿ ಬೊಳಾರ, ತುಂಬೆ ಗ್ರಾ.ಪಂ. ಅಧ್ಯಕ್ಷ ಪ್ರವೀಣ್, ಮಂಗಳೂರು ಮ.ನಪಾ.ಆಯುಕ್ತ ಅಕ್ಷಯ ಶ್ರೀದರ್,ಮ.ನಪಾ ಎ.ಡಬ್ಲೂ ಚೇತನ್, ಎ.ಇ.ಅಶ್ವಿನಿ ಮತ್ತಿತರರು ಉಪಸ್ಥಿತರಿದ್ದರು.