ಮಂಗಳೂರು, ಮಾ. 21 (DaijiworldNews/SM): ಆರ್ ಟಿಐ ಕಾರ್ಯಕರ್ತ ವಿನಾಯಕನ ಬಾಳಿಗ ಹತ್ಯೆ ಪ್ರಕರಣ ನಡೆದು ಆರು ವರ್ಷಗಳು ಕಳೆದಿದ್ದು, ಇಲ್ಲಿಯ ತನಕ ಆರೋಪಿಗಳ ಬಂಧನವಾಗದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಸಮಾನ ಮನಸ್ಕ ವೇದಿಕೆ ಪ್ರತಿಭಟನೆ ನಡೆಸಿದರು.
ಈ ವೇಳೆ ಮಂಗಳೂರಿನ ವೆಂಕಟರಮಣ ದೇಗುಲ ಮುಂಭಾಗ ಪ್ರಾರ್ಥನೆ ಸಲ್ಲಿಸಲಾಯಿತು. ದೇಗುಲ ಮುಂಭಾಗ ವಿನಾಯಕ್ ಬಾಳಿಗ ಸಹೋದರಿಯಿಂದ ಪ್ರಾರ್ಥನೆ ನೆರವೇರಿಸಿದರು. ಆರು ವರ್ಷಗಳ ಮೊದಲು ಸಹೋದರನ ಕೊಲೆಯಾಗಿದೆ. ಆ ಬಳಿಕ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ. ಸಹೋದರನ ಸಾವಿನ ಬಳಿಕ ತಂದೆ, ತಾಯಿ ತೀರಿಕೊಂಡರು. ಈ ಬಾರಿ ನಮ್ಮ ಹೋರಾಟಕ್ಕೆ ಅನೇಕರು ಬೆಂಬಲ ನೀಡಿದ್ದಾರೆ. ದೇವರ ನ್ಯಾಯಕ್ಕಾಗಿ ಕಾಯುತ್ತಿದ್ದೇವೆ. ದೇವರ ನ್ಯಾಯದ ಮುಂದೆ ಏನು ಇಲ್ಲ. ಸಹೋದರನ ಹತ್ಯೆಯಲ್ಲಿ ಪ್ರತ್ಯೇಕ್ಷ ಪರೋಕ್ಷ ಸಹಕರಿಸಿದವರಿಗೆ ಶಿಕ್ಷೆ ಆಗಬೇಕು ಎಂದು ವಿನಾಯಕ ಬಾಳಿಗಾ ಅವರ ಸಹೋದರಿ ಅನುರಾಧ ಕಣ್ಣೀರಿಟ್ಟು ಪ್ರಾರ್ಥಿಸಿದ್ದಾರೆ.