ಕಾಸರಗೋಡು, ಮಾ 21 (DaijiworldNews/MS): ಕಾಸರಗೋಡಿನಿಂದ ತಂಡವೊಂದು ಭಾರತದೊಂದಿಗೆ ರಾಜತಾಂತ್ರಿಕ ಸಂಬಂಧವಿಲ್ಲದೆಯೇ ಯೆಮೆನ್ ಗೆ ಮತೀಯ ಶಿಕ್ಷಣಕ್ಕಾಗಿ ಹೋದ ಘಟನೆ ಕುರಿತು ಇಂಟೆಲಿಜೆನ್ಸ್ ಎಜೆನ್ಸಿ ತನಿಖೆ ಆರಂಭಿಸಿದೆ. ಈ ತಂಡದಲ್ಲಿ 14 ಮಂದಿ ಇದ್ದು, ಕಾಸರಗೋಡಿನ ನಿವಾಸಿಗಳು ಮತ್ತು ಅವರ ಹತ್ತಿರದ ಸಂಬಂಧಿಕರಿದ್ದರು ಎಂದು ತಿಳಿದುಬಂದಿದೆ.
ವಿದ್ಯಾನಗರದ ಉಳಿಯತ್ತಡ್ಕ ಎಸ್.ಪಿ ನಗರದ ನಿವಾಸಿ, ಪತ್ನಿಯ ತಂದೆ, ತಾಯಿ ಇತರ ಸಂಬಂಧಿಕರ ಮಹಿಳೆಯರು, ನಾಲ್ವರು ಅಪ್ರಾಪ್ತ ಮಕ್ಕಳ 14 ಮಂದಿ ಯೆಮೆನ್ ಗೆ ತೆರಳಿದ್ದರು. ಈ ತಂಡ ಅನಂತರ ಮಸ್ಕತ್ ಮೂಲಕ ಕಲ್ಲಿಕೋಟೆ ವಿಮಾನ ನಿಲ್ದಾಣಕ್ಕೆ ಮರಳಿದ್ದರೆ. ಇವರ ಎಮಿಗ್ರೇಶನ್ ಮಾಹಿತಿಗಳನ್ನು ವಿಮಾನ ನಿಲ್ದಾಣದ ಅಧಿಕಾರಿಗಳ ಮೂಲಕ ತನಿಖಾ ತಂಡ ಸಂಗ್ರಹಿಸಿದೆ.
ಒಂದು ತಿಂಗಳ ಹಿಂದೆ ಈ ತಂಡ ಯೆಮೆನ್ ಗೆ ತೆರಳಿತ್ತು. ಸುಲ್ತಾನೇಟ್ ಆಫ್ ಒಮಾನ್ ಸಲಾಲಕ್ಕೆ ತಲುಪಿ ಅಲ್ಲಿಂದ ಯೆಮೆನ್'ನ ರಾಜಧಾನಿ ಸನತ್ತ್ ಗೆ ಹೋಗುವುದು ತಂಡದ ಮೂಲದ ಉದ್ದೇಶವಾಗಿತ್ತು. ಆದರೆ ಅದು ಫಲಕಾರಿಯಾಗಿರಲಿಲ್ಲ. ಯೆಮೆನ್ ಚೆಕ್ ಪೋಸ್ಟ್ ಅಧಿಕಾರಿಗಳು ಅವರನ್ನು ತಡೆದು ಮರಳಿ ಕಳುಹಿಸಿದ್ದರು.
ಮರಳಿ ಬಂದ 14 ಮಂದಿಯೂ ಸಲಫಿಗಳ ದಾಇಸ್ ವಿಭಾಗಕ್ಕೆ ಒಳಪಟ್ಟವರಾಗಿದ್ದಾರೆ. ಆಡು ಮೇಯಿಸಿ ಜೀವನ ಹಾಗೂ ಮತ ಶಿಕ್ಷಣ ಇವರ ಜೀವನ ಕ್ರಮವಾಗಿದೆ.
ಯೆಮೆನ್ ಏಷ್ಯಾದ ಅತ್ಯಂತ ಬಡ ದೇಶಗಳಲ್ಲಿ ಒಂದಾಗಿದೆ . ಅಂತರ್ಯುದ್ಧ, ದಂಗೆಯಿಂದ ಧ್ವಂಸಗೊಂಡಿದ್ದರೂ, ಇಸ್ಲಾಂ ಧರ್ಮವನ್ನು ಅಧ್ಯಯನ ಮಾಡಲು ಬಯಸುವವರಿಗೆ ಇದು ಇನ್ನೂ ಬೇಡಿಕೆಯ ತಾಣವಾಗಿದೆ.ಭಾರತೀಯರು ಯೆಮೆನ್ಗೆ ಹೋಗಲು ಕೇಂದ್ರ ಸರ್ಕಾರದಿಂದ ವಿಶೇಷ ಅನುಮತಿ ಪಡೆಯಬೇಕಾಗಿದೆ