ಬಂಟ್ವಾಳ, ಮಾ 19 (DaijiworldNews/HR): ಬಂಟ್ವಾಳ ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡುವುದೇ ನನ್ನ ಆದ್ಯತೆಯಾಗಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ಒಂದು ಸಾವಿರ ಕೋ.ರೂ ಗೂ ಮಿಕ್ಕಿ ಅಭಿವೃದ್ಧಿ ಕಾಮಗಾರಿ ಕ್ಷೇತ್ರದಲ್ಲಿ ನಡೆಸಲಾಗಿದ್ದು, ಈ ತಿಂಗಳಲ್ಲಿಯೇ 450 ಕೋ.ರೂ.ವೆಚ್ಚದ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಹೇಳಿದ್ದಾರೆ.
2.20 ಕೋ.ರೂ. ವೆಚ್ಚದಲ್ಲಿ ಅರಳ ಗ್ರಾ.ಪಂ.ವ್ಯಾಪ್ತಿಯ ಕುಟ್ಟಿಕಳದಿಂದ ಕಲ್ಲೇರಿ ಸಂಪರ್ಕ ರಸ್ತೆ ಕಾಮಗಾರಿಗೆ ಹಾಗೂ 6.67 ಕೋ.ರೂ.ವೆಚ್ಚದಲ್ಲಿ ತಾಲೂಕಿನ ಕರ್ಪೆ ಗ್ರಾಮದ ಗುತ್ತಿಗೆ ಬಳ್ಳಿಯಿಂದ ರಾಯಿ ಮುದ್ದಾಜೆ ರಸ್ತೆ ಕಾಂಕ್ರೀಟಿಕರಣ ಸಂಪರ್ಕ ಸೇತುವೆ ಕಾಮಗಾರಿಗೆ ಶನಿವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದ ಅವರು, ಶಿಲಾನ್ಯಾಸ ನಡೆಸಲಾದ ರಸ್ತೆ ಕಾಮಗಾರಿಯನ್ನು ಮುಂದಿನ ನಾಲ್ಕು ತಿಂಗಳಲ್ಲಿ ಸಂಪೂರ್ಣಗೊಳಿಸಿ ಜನರ ಉಪಯೋಗಕ್ಕೆ ಲೋಕಾರ್ಪಣೆಗೊಳಿ ಸಲಾಗುವುದು ಎಂದು ಅವರು ಭರವಸೆ ನೀಡಿದರು.
ಶಾಸಕನಾಗಿ ಜನತೆಯ ಬೇಡಿಕೆಗಳನ್ನು ಪ್ರಾಮಾಣಿಕವಾಗಿ ಪೂರೈಸಿದ ಸಂತಸ ಇದೆ ಎಂದ ಅವರು, ಗ್ರಾಮದ ಅಭಿವೃದ್ಧಿ ಕಾಮಗಾರಿಗಳು ನಡೆಯುವ ಸಂದರ್ಭದಲ್ಲಿ ಜನರು ಕೂಡ ಸಹಕಾರ ನೀಡುವಂತೆ ಮನವಿ ಮಾಡಿದ ಶಾಸಕರು, ಮುಂದಿನ ದಿನಗಳಲ್ಲಿ ಬಾಕಿ ಉಳಿದಿರುವ ಬೇಡಿಕೆಯನ್ನು ಹಂತ,ಹಂತವಾಗಿ ಪೂರೈಸುವುದಾಗಿ ಭರವಸೆ ನೀಡಿದರು.
ಗ್ರಾಮ,ಗ್ರಾಮದ ಅಭಿವೃದ್ಧಿಗಾಗಿ ಕೋಟಿ ಕೋಟಿ ಅನುದಾನ ಒದಗಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಗುಣ ಹೊಂದಿರುವ ಅಭಿವೃದ್ಧಿ ಹರಿಕಾರ ರಾಜೇಶ್ ನಾಯ್ಕ್ ಅವರನ್ನು ಅಭಿನಂದಿಸಿದ ಕರ್ಪೆ ಗ್ರಾಮದ ಜನರ ಮಾನವೀಯ ಗುಣ ಇತರರಿಗೆ ಮಾದರಿ ಎಂದು ಮಾಜಿ.ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ ಹೇಳಿದರು .
ಸಂಗಬೆಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ, ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ,ಕೆಯುಡಬ್ಲುಸಿ ಸದಸ್ಯೆ ಸುಲೋಚನ ಜಿ.ಕೆ.ಭಟ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ತಾ.ಪಂ.ಮಾಜಿ ಸದಸ್ಯರಾದ ಪ್ರಭಾಕರ ಅರ್ಕಿಕೀರ್ತಿ ಇಂದ್ರ,ರತ್ನಕುಮಾರ್ ಚೌಟ, ರೇವತಿ, ರಾಯಿ ಗ್ರಾ.ಪಂ.ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ, ಗ್ರಾಮಪಂಚಾಯತ್ ಸದಸ್ಯರು ಪ್ರಮುಖರಾದ ರಮನಾಥ ರಾಯಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಉಮೇಶ್ ಅರಳ, ಸುದರ್ಶನ ಬಜ, ಕಾರ್ತಿಕ್ ಬಲ್ಲಾಳ್, ರಾಯಿ ಗ್ರಾಮ ಪಂಚಾಯತ್ ಸದಸ್ಯ ಸಂತೋಷ್ ರಾಯಿಬೆಟ್ಟು, ನವೀನ್ ಕುಮಾರ್, ತೇಜಸ್, ಹರೀಶ್ ಆಚಾರ್ಯ ರಾಯಿ, ಕಾರ್ಯ ನಿರ್ವಾಹಕ ಇಂಜಿನಿಯರ್ ಪ್ರಭಾಕರ್, ಪಿ.ಎಂ.ಜಿ.ಎಸ್.ವೈ ವಿಭಾಗದ ಇಂಜಿನಿಯರ್ ಪ್ರಸನ್ನ ಕುಮಾರ್, ಪಿ.ಡಿಒ ಪದ್ಮನಾಯ್ಕ್, ಮೊಗರೋಡಿ ಕನ್ ಸ್ಟ್ರೈಕ್ ಸನ್ ಇಂಜಿನಿಯರ್ ದಾಮೋದರ, ಅರಳ ಗ್ರಾ.ಪಂ. ಅದ್ಯಕ್ಷ ಲಕ್ಮೀದರ ಶೆಟ್ಟಿ, ಉಪಾಧ್ಯಕ್ಷೆ ಪ್ರೇಮ, ಸದಸ್ಯರು, ಪ್ರಮುಖರಾದ ರಂಜನ್ ಕುಮಾರ್ ಶೆಟ್ಟಿ, ರವಿ ಅರಸ, ಚಂದ್ರಶೇಖರ್ ಶೆಟ್ಟಿ, ಸುಕುಮಾರ್, ಉಮೇಶ್ ಡಿ.ಎಮ್ ಅರಳ, ಪಿ.ಡಿ.ಒ ಧರ್ಮರಾಜ್ ಮೊದಲಾದವರು ಉಪಸ್ಥಿತರಿದ್ದರು.
ರಸ್ತೆಯ ಕಾಮಗಾರಿ ನಿರ್ಮಾಣಕ್ಕೆ ಸಹಕಾರ ನೀಡಿದ ಮಾಜಿ ಜಿ.ಪಂ.ಸದಸ್ಯರಾದ ತುಂಗಪ್ಪ ಬಂಗೇರ, ಸುಲೋಚನ ಜಿ.ಕೆಭಟ್, ಮಾಜಿ ತಾ.ಪಂ.ಸದಸ್ಯ ಅರ್ಕಕೀರ್ತಿ ಇಂದ್ರ ಹಾಗೂ ಅನುದಾನ ಒದಗಿಸಿದ ಶಾಸಕ ರಾಜೇಶ್ ನಾಯ್ಕ್ ಅವರನ್ನು ಗೌರವಿಸಲಾಯಿತು.