ಬಂಟ್ವಾಳ, ಮಾ 19 (DaijiworldNews/HR): ಸಮಸ್ಯೆಗಳನ್ನು ಹೇಳಿಕೊಂಡು ಬಂದ ಜನರನ್ನು ಅಲೆದಾಡಿಸದೆ, ಶೀಘ್ರವಾಗಿ ಕೆಲಸ ಮಾಡಿಕೊಡುವಂತೆ ಅಧಿಕಾರಿಗಳಿಗೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಸೂಚನೆ ನೀಡಿದರು.
ಬಂಟ್ವಾಳ ತಾಲೂಕು ಆಡಳಿತದ ವತಿಯಿಂದ ಬಡಗಬೆಳ್ಳೂರು ಗ್ರಾಮದಲ್ಲಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಧಿಕಾರಿಗಳು ಕೆಲಸ ಮಾಡುವಲ್ಲಿ ವಿಳಂಬ ಮಾಡಿದರೆ ನೇರವಾಗಿ ನನ್ನ ಗಮನಕ್ಕೆ ತನ್ನಿ ಎಂದು ಅವರು ಹೇಳಿದರು.
ಬಡಗಬೆಳ್ಳೂರು ಗ್ರಾಮದಲ್ಲಿ 50 ಕ್ಕಿಂತಲೂ ಹೆಚ್ಚು ಮನೆಯವರಿಗೆ ತಾಂತ್ರಿಕ ತೊಂದರೆಯಿಂದ 94 ಸಿ ಪತ್ರ ಸಿಗದೆ ವಂಚಿತರಾದವರಿಗೆ ನ್ಯಾಯ ಒದಗಿಸಿ 94 ಸಿ ಪತ್ರವನ್ನು ನೀಡುವ ಕಾರ್ಯ ಶೀಘ್ರವಾಗಿ ಮಾಡಲಿದ್ದೇವೆ ಎಂದು ಭರವಸೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಂಟ್ವಾಳ ತಹಶೀಲ್ದಾರ್ ರಶ್ಮಿ , ಗ್ರಾಮ ವಾಸ್ತವ್ಯ ತಾಲೂಕಿನ ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡುವ ಕಾರ್ಯಕ್ರಮವಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಗ್ರಾ.ಪಂ.ಅಧ್ಯಕ್ಷ ಪ್ರಕಾಶ್ ಅಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಮಮತಾ, ತಾಲೂಕು ಸಹಾಯಕ ನಿರ್ದೇಶಕ ಹರೀಶ್, ಗ್ರೇಡ್ 2 ತಹಶೀಲ್ದಾರ್ ಕವಿತಾ,ಗ್ರಾ.ಪಂ.ಸದಸ್ಯರಾದ ಉಮೇಶ್ ಪರಿಮೊಗರು, ವಿಜಯಪುರುಷೋತ್ತಮ ಪೂಜಾರಿ, ಚಂದ್ರಹಾಸ ಕಾಗುಡ್ಡೆ, ರಘವೀರ್ ಆಚಾರ್ಯ ಗರ್ಗಲ್, ಚೈತ್ರಾ ನವೀನ್ ಪೂಜಾ ರಿ, ಗೀತಾ ಗಣೇಶ್, ಉಪತಹಶೀಲ್ದಾರ್ ಗಳಾದ ನರೇಂದ್ರ ನಾಥ್ ಭಟ್, ನವೀನ್ ಬೆಂಜನಪದವು, ಪಾಣೆಮಂಗಳೂರು ಕಂದಾಯ ನಿರೀಕ್ಷಕ ವಿಜಯ್ ಆರ್, ಗ್ರಾಮ ಕರಣೀಕ ನಾಗರಾಜ್ ಹಾಗೂ ವಿವಿಧ ಇಲಾಖಾ ಅಧಿಕಾರಿ ಗಳು ಮತ್ತು ಕಂದಾಯ ಇಲಾಖಾ ಸಿಬ್ಬಂದಿ ಗಳು ಹಾಜರಿದ್ದರು.