ಮಂಗಳೂರು, ಮಾ. 16 (DaijiworldNews/SM): ಕರಾವಳಿ ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ದ.ಕ. ಜಿಲ್ಲೆಯಲ್ಲಿ ಇಂದು 2 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಉಡುಪಿಯಲ್ಲಿ ಯಾವುದೇ ಪ್ರಕರಣ ವರದಿಯಾಗಿಲ್ಲ.
ದ.ಕ. ಜಿಲ್ಲೆಯ ಇಂದಿನ ಕೊರೋನಾ ರಿಪೋರ್ಟ್:
ದ.ಕ. ಜಿಲ್ಲೆಯಲ್ಲಿ ಇಂದು 2 ಮಂದಿಯಲ್ಲಿ ಸೋಂಕು ಪತ್ತೆ
ಮೂವರು ದ.ಕ. ಜಿಲ್ಲೆಯಲ್ಲಿ ಇಂದು ಗುಣಮುಖರಾಗಿ ಬಿಡುಗಡೆ
21-ಪ್ರಸ್ತುತ ಇರುವ ಸಕ್ರೀಯ ಪ್ರಕರಣಗಳು
ಜಿಲ್ಲೆಯಲ್ಲಿ ಇಂದು ಸೋಂಕಿಗೆ ಬಲಿಯಾದ ಬಗ್ಗೆ ವರದಿ ಇಲ್ಲ
ಉಡುಪಿ ಜಿಲ್ಲೆಯ ಇಂದಿನ ಕೊರೋನಾ ವರದಿ:
ಉಡುಪಿಯಲ್ಲಿ ಇಂದು ಯಾವುದೇ ಪಾಸಿಟಿವ್ ದೃಢವಿಲ್ಲ
ಇಂದು ಇಬ್ಬರು ಗುಣಮುಖರಾಗಿ ಬಿಡುಗಡೆ
ಪ್ರಸ್ತುತ ಓರ್ವ ಜಿಲ್ಲೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ
ಜಿಲ್ಲೆಯಲ್ಲಿ ಇಂದು ಯಾವುದೇ ಕೋವಿಡ್ ಸಾವು ವರದಿ ಇಲ್ಲ