ವಿಟ್ಲ, ಮಾ. 16 (DaijiworldNews/SM): ಕುಡ್ತಮುಗೇರು ಸಮೀಪದ ಮಂಕುಡೆಯ ಕಲ್ಕಾಜೆ ಎಂಬಲ್ಲಿ ಸ್ಕೂಲ್ ಬಸ್ ಮತ್ತು ಕಾರಿನ ನಡುವೆ ಬುಧವಾರ ಅಪಘಾತ ನಡೆದಿದೆ.
ಅಪಘಾತದಲ್ಲಿ ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು, ಬಸ್ಸಿಗೂ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.