ಅಂತು ಇಂತು "ಅಂತು" ಸಿನಿಮಾ ಅಕ್ಟೋಬರ್ 20 ರ ಶುಕ್ರವಾರ ಬಿಗ್ ಸಿನಿಮಾಸ್ ನಲ್ಲಿ ತೆರೆಗೆ ಅಪ್ಪಳಿಸಲಿದೆ. ಕರಾವಳಿಯ ಚಿತ್ರರಂಗದಲ್ಲಿ ಕೊಂಕಣಿ ಚಿತ್ರ ಇತಿಹಾಸವನ್ನೊಮ್ಮೆ ಮೆಲುಕು ಹಾಕಿದ್ರೆ, ಜಿ ಎಸ್ ಬಿ ಕೊಂಕಣಿ ಭಾಷೆಯಲ್ಲಿ ಬರ್ತಾ ಇರೋ 5 ನೇ ಚಿತ್ರ ಇದು. ಯು ಸಟೀಪಿಕೇಟ್ ದೊರೆತ ಅದ್ಬುತ ಕಥೆಯ ಹಂದರವನ್ನು ಒಳಗೊಂಡ ಸಿನಿಮಾ. ಶ್ರೀ ಮಹಾಮಯಿ ಸಿನಿ ಕ್ರಿಯೇಶನ್ ಬ್ಯಾನರ್ನಡಿ ನಿರ್ಮಾಣವಾದ ಜಿಎಸ್ಬಿ ಕೊಂಕಣಿ ಭಾಷೆಯಲ್ಲಿ ಮೂಡಿಬಂದಿರುವ ಚಿತ್ರ ಅಂತು. ಈಗಾಗಲೇ ಹಲವಾರು ಕಿರುಚಿತ್ರಗಳನ್ನು ನಿರ್ದೇಶಿದ್ದ ಕರೋಪಾಡಿ ಅಕ್ಷಯ್ ನಾಯಕ್ ಅಂತು ಚಿತ್ರದ ನಿರ್ಮಾಣ, ನಿರ್ದೇಶನ, ಕತೆ,ಚಿತ್ರಕತೆ, ಛಾಯಗ್ರಹಣ ಹಾಗೂ ಸಂಕಲನದ ಜವಬ್ದಾರಿ ಹೊತ್ತಿದ್ದಾರೆ. ರಾಜ್ಯಪ್ರಶಸ್ತಿ ಪುರಸ್ಕೃತ ನಟ ಎಂ.ಕೆ ಮಠ ಅವರ ಸಂಭಾಷಣೆ ಚಿತ್ರಕ್ಕಿದೆ.ಅದನ್ನು ವೆಂಕಟೇಶ್ ಬಾಳಿಗಾ ಕೊಂಕಣಿಗೆ ಅನುವಾದಿಸಿದ್ದಾರೆ. ಪತ್ನಿಯ ಮರಣಾನಂತರ ಎರಡನೇ ಮದುವೆಯಾಗದೆ ತನ್ನ ಮಕ್ಕಳಿಗಾಗಿಯೆ ಮುಂದಿನ ಜೀವನ ಸವೆಸುವ ತಂದೆಯಾಗಿ ಹಾಗೂ ಈ ನಡುವೆ ತನ್ನದೇ ಸಮುದಾಯದ ಹೀಯಾಳಿಕೆಗೆ ಮತ್ತು ಸಮಾಜದ ತಿರಸ್ಕಾರಕ್ಕೆ ಹೇಗೆ ಒಳಗಾಗುತ್ತನೆ ಎನ್ನೋದೆ ಚಿತ್ರದ ಕಥಾವಸ್ತು. ಜೊತೆಗೆ ಒಂದಷ್ಟು ನವಿರಾದ ಹಾಸ್ಯವೂ ಚಿತ್ರದಲ್ಲಿದೆ. ಇನ್ನು ಚಿತ್ರದಲ್ಲಿ 3 ಹಾಡುಗಳಿದ್ದು ಈಗಾಗಲೇ ಈ ಹಾಡುಗಳು ಯೂಟ್ಯೂಬ್ ನಲ್ಲಿ ಮೆಚ್ಚುಗೆ ಗಳಿಸಿದೆ. ಚಿತ್ರದ ಮುಖ್ಯಭೂಮಿಕೆಯಲ್ಲಿ ಚಿದಾನಂದ ಕಾಮತ್ , ಪೂರ್ಣಿಮಾ ಸುರೇಶ್, ದಿನೇಶ್, ಪ್ರಭುಕಲ್ಲೊಟ್ಟೆ, ಮುಂತಾದವರು ಕಾಣಿಸಿಕೊಂಡಿದ್ದಾರೆ.