ಮಂಗಳೂರು, 20(MSP):ಆದಾಯ ತೆರಿಗೆ ಇಲಾಖೆಯ ಸಹಯೋಗದೊಂದಿಗೆ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ ಡಿಸೆಂಬರ್ 19 ರ ಬುಧವಾರ, ಅತ್ತಾವರದ ಕಾಲೇಜು ಆವರಣದಲ್ಲಿ ತೆರಿಗೆ ಆಕ್ಟ್ ಮತ್ತು ಆದಾಯ ತೆರಿಗೆ ಕಾನೂನು ಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಂಗಳೂರಿನ ವಾರ್ಡ್ 2 (5) ನೇಯ ಆದಾಯ ತೆರಿಗೆ ಅಧಿಕಾರಿ ನಥಾಲಿಯಾ ಹೆಲೆನ್ ಲೋಬೊ "ಆದಾಯ ತೆರಿಗೆ ರಿಟರ್ನ್ ಫೈಲ್ ಸರಿಯಾದ ಸಮಯದೊಳಗೆ ಮಾಡಬೇಕು. ಇದನ್ನು ಪಾಲಿಸದವರು ರಿಟರ್ನ್ ಸಂಗ್ರಹಿಸಲು ಅವಕಾಶವನ್ನು ಕಳೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು.
ವೃತ್ತಿಪರರಿಗೆ ಐಟಿಆರ್ ಫಾರ್ಮ್ 3 ವಿಭಾಗದ ಅರ್ಜಿ ಅಗತ್ಯವಾಗಿದ್ದು, ಅದನ್ನು ಭರ್ತಿ ಮಾಡಿ ಆಧಾರ್ ಮತ್ತು ಪ್ಯಾನ್ ಕಾರ್ಡ್ ನೊಂದಿಗೆ ಇಲಾಖೆಗೆ ಕಡ್ಡಾಯವಾಗಿ ನೀಡಬೇಕು.
ವೇತನ ಅಥವಾ ಪಿಂಚಣಿ / ಬಹು ಮನೆಗಳನ್ನು ಹೊಂದಿದವರ ಆದಾಯ ವಿವರಗಳನ್ನು ಐಟಿಆರ್ ಫಾರಂ 2 ರಲ್ಲಿ ನಮೂದಿಸಬೇಕಾಗಿದೆ. ಒಂದು ವೇಳೆ ಆದಾಯ 2 ಲಕ್ಷಕ್ಕಿಂತ ಹೆಚ್ಚು ಇದ್ದರೆ ಅದರ ಆದಾಯ ಮೂಲಗಳ ವಿವರಗಳನ್ನು ಇಲಾಖೆಗೆ ಸಲ್ಲಿಸಬೇಕು. 2018 -19 ಅದಾಯ ತೆರಿಗೆಯ ದರ ನಿಗದಿ ಪ್ರಕಾರ ರೂ. 2,50,000 ದಿಂದ 3,00,000 5% ಶೇಕಡ , 3 ಲಕ್ಷದಿಂದ 5 ಲಕ್ಷದವರೆಗೆ 5%, 5 ಲಕ್ಷದಿಂದ 10 ಲಕ್ಷದವರೆಗೆ 20% ಶೇಕಡ, ಮತ್ತು ಹತ್ತು ಲಕ್ಷದಿಂದ ಹೆಚ್ಚಿದ್ದರೆ 30% ಹಾಗೂ 3% ದಷ್ಟು ಸೆಸ್ ಎಲ್ಲರಿಗೂ ಸಾಮಾನ್ಯವಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಆದಾಯ ತೆರಿಗೆ ವಿಭಾಗ ಎರಡರ ಸಹಾಯಕ ಆಯುಕ್ತ ಸುರಬ್ಜ್ ದುಬೆ, ಕೆಎಂಸಿ, ಡೀನ್ ಡಾ. ವೆಂಕಟರಾಯ್ ಪ್ರಭು, ಕೆಎಂಸಿ ದಂತ ವೈದ್ಯಕೀಯ ಕಾಲೇಜಿನ ಆನಂದ್ ವೇಣು ಗೋಪಾಲ್ , , ಡಾ. ದೀಲೀಪ್ ಜಿ ನಾಯಕ್ ಮುಂತಾದವರು ಉಪಸ್ಥಿತರಿದ್ದರು.