ನವದೆಹಲಿ, ಡಿ 20(MSP): ಡಿ.21 ರಿಂದ ಐದು ದಿನಗಳ ಕಾಲ ದೇಶಾದ್ಯಂತ ಬ್ಯಾಂಕ್ಗಳು ಬಾಗಿಲು ಮುಚ್ಚಲಿವೆ. ಹೀಗಾಗಿ ಇದರಿಂದ ಎಟಿಎಂಗಳಲ್ಲಿ ಹಣದ ಕೊರತೆ ಎದುರಿಸುವ ಸಾಧ್ಯತೆ ಇದ್ದು, ಎದುರಾಗಬಹುದಾದ ಹಣಕಾಸಿನ ಅಡಚಣೆಯಿಂದ ತಪ್ಪಿಸಿಕೊಳ್ಳಲು ಗ್ರಾಹಕರು ಬ್ಯಾಂಕ್ನ ವ್ಯವಹಾರಗಳಳನ್ನು ಮುಂಚಿತವಾಗಿ ಮುಗಿಸುವ ಹಾಗೂ ಅಗತ್ಯ ಹಣವನ್ನು ಡ್ರಾ ಮಾಡಿಟ್ಟುಕೊಳ್ಳವುದು ಒಳಿತು.
ಹಲವು ಬೇಡಿಕೆಗಳ ಈಡೇರಿಕೆಗಾಗಿ ಯುಎಫ್ ಬಿಯು (ಬ್ಯಾಂಕ್ ಒಕ್ಕೂಟ)ಡಿಸೆಂಬರ್ 26ರಂದು ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ. ಇದಲ್ಲದೆ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ಸಹ ಪ್ರತ್ಯೇಕವಾಗಿ ಡಿಸೆಂಬರ್ 21ರಂದು ಒಂದು ದಿನದ ಮುಷ್ಕರ ನಡೆಸಲಿದೆ. ಇದರ ಮದ್ಯದಲ್ಲಿ ಸರ್ಕಾರಿ ರಜೆಗಳು ಬಂದು ಬ್ಯಾಂಕ್ ಗಳು ಐದು ದಿನಗಳ ಕಾಲ ಬಾಗಿಲು ಮುಚ್ಚಲಿದೆ.
ಡಿಸೆಂಬರ್ 21ರಂದು ಶುಕ್ರವಾರ ಬ್ಯಾಂಕ್ ನೌಕರರ ಒಕ್ಕೂಟದ ಮುಷ್ಕರವಾಗಿದ್ದರೆ 22 ಶನಿವಾರನಾಲ್ಕನೇ ಶನಿವಾರದ ರಜೆ ಇರಲಿದೆ.23 ಭಾನುವಾರವಾದರೆ 25 ಮಂಗಳವಾರ ಕ್ರಿಸ್ ಮಸ್ ಪ್ರಯುಕ್ತ ರಜೆ, 26ಕ್ಕೆ ಬ್ಯಾಂಕ್ ಒಕ್ಕೂಟದ ರಾಷ್ಟ್ರವ್ಯಾಪಿ ಮುಷ್ಕರವಿರಲಿದ್ದು ಈ ನಡುವೆ ಸೋಮವಾರ ಡಿಸೆಂಬರ್ 24ರಂದು ಮಾತ್ರವೇ ಬ್ಯಾಂಕ್ ವ್ಯವಹಾರ ನಡೆಯಲಿದೆ.
24ರಂದು ಸೋಮವಾರ ಮಾತ್ರ ಕಾರ್ಯನಿರ್ವಹಣೆ ಇದ್ದು, ಅಂದು ಸಿಬ್ಬಂದಿ ರಜೆ ತೆರಳಿದರೆ ಅಂದೂ ಕೂಡಾ ಬ್ಯಾಂಕ್ನ ವಹಿವಾಟು ನಡೆಯುವುದು ಕಷ್ಟ ಎನ್ನಲಾಗಿದೆ.ವೇತನ ಪರಿಷ್ಕರಣೆ ವಿಷಯ ಸಂಬಂಧ ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ವಿರುದ್ಧ ಡಿ.21ರಂದು ಎಐಬಿಒಸಿ ಮುಷ್ಕರಕ್ಕೆ ಕರೆ ನೀಡಿದೆ.ಬ್ಯಾಂಕ್ ಆಫ್ ಬರೋಡಾ, ದೇನಾ ಬ್ಯಾಂಕ್ ಮತ್ತು ವಿಜಯ ಬ್ಯಾಂಕ್ಗಳ ವಿಲೀನವನ್ನು ವಿರೋಧಿಸಿ ಯುಎಫ್ಬಿಯು ಡಿ.26ರಂದು ಮುಷ್ಕರಕ್ಕೆ ಕರೆ ನೀಡಿದೆ.