ಉಡುಪಿ, ಮಾ 07 (DaijiworldNews/HR): ಗ್ರಾಹಕರ ಮನೆಮಾತಾಗಿರುವ ಅಚ್ಚುಮೆಚ್ಚಿನ ಹರ್ಷ ಸಂಸ್ಥೆಯು ಪ್ರತಿ ಬಾರಿಯಂತೆ ಗ್ರಾಹಕರೆಲ್ಲರನ್ನು ಆಹ್ವಾನಿಸಿ, ಸಡಗರದಿಂದ ಆಚರಿಸುವ ಏಳು ದಿನ ನಡೆಯಲಿರುವ ಹರ್ಷೋತ್ಸವವನ್ನು ಸೋಮವಾರದಂದು ಉಡುಪಿಯ ಮೂರು ಶೋರೂಮ್ ಗಳಲ್ಲಿ ಅತಿಥಿಗಳು ದೀಪ ಬೆಳಗುವ ಮೂಲಕ ಉದ್ಘಾಟನೆ ನೆರವೇರಿಸಲಾಯಿತು.
ಕೆ. ಎಂ. ರಸ್ತೆಯಲ್ಲಿನ ಮಳಿಗೆಯ ಹರ್ಷೋತ್ಸವವನ್ನು ಹಿರಿಯರಾದ ನರೇಂದ್ರ ಜೆ. ಪಟೇಲ್, ಪ್ರಕಾಶ್ ರಿಟೈಲ್ ಪೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕರಾದ ಸೂರ್ಯಪ್ರಕಾಶ್ ರವರು ಜೊತೆಗೂಡಿ ಉದ್ಘಾಟಿಸಿದರು.
ಕಿತ್ತೂರು ರಾಣಿ ಚೆನ್ನಮ್ಮ ರೋಡ್ ಮಳಿಗೆಯ ಹರ್ಷೋತ್ಸವವನ್ನು ಕಟ್ಟಡ ಮಾಲೀಕರಾದ ಧನ್ಜಿ ಭಾಯ್ ಪಟೇಲ್ ಹಾಗು ಪುರುಷೋತ್ತಮ್ ಪಟೇಲ್ ಹಾಗು ಸಿಟಿ ಬಸ್ ಸ್ಟ್ಯಾಂಡ್ ಬಳಿಯ ಮಳಿಗೆಯ ಹರ್ಷೋತ್ಸವವನ್ನು ಎಂ ಆರ್ ಕಾರ್ನಾಡ್ ಮತ್ತು ಸನ್ಸ್ ಫ್ಯೂಯೆಲ್ ನ ಮಾಲಕರಾದ ಆನಂದ್ ಕಾರ್ನಾಡ್ ಉದ್ಘಾಟಿಸಿದರು.
ಪ್ರಕಾಶ್ ರಿಟೈಲ್ ಪೈವೇಟ್ ಲಿಮಿಟೆಡ್ ನ ನಿರ್ದೇಶಕರಾಗಿರುವ ನವೀನ ಬಂಗೇರ, ಎಂ.ಕೆ. ಸನಿಲ್, ರಾಜೇಶ್ ಎಂ, ಸುರೇಶ್ ಎಂ, ಕೆ. ಎಂ. ರೋಡ್ನ ಮಳಿಗೆಯ ಬ್ರಾಂಚ್ ಮ್ಯಾನೇಜರ್ ಪ್ರದೀಪ್, ಕಿತ್ತೂರು ರಾಣಿ ಚೆನ್ನಮ್ಮ ರೋಡ್ ನಲ್ಲಿರುವ ಹರ್ಷ ಬ್ರಾಂಚ್ ನ ಬ್ರಾಂಚ್ ಮ್ಯಾನೇಜರ್ ರಾನ್ಸನ್ಸ್, ಸಿಟಿ ಬಸ್ ಸ್ಟ್ಯಾಂಡ್ ಬಳಿ ಮಳಿಗೆಯ ಬ್ರಾಂಚ್ ಮ್ಯಾನೇಜರ್ ಸ್ಟಿವನ್, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಹರ್ಷದ ವಾರ್ಷಿಕಾಚರಣೆ ಹರ್ಷೋತ್ಸವ ಮಾರ್ಚ್ 14 ರಿಂದ 20ರವರೆಗೆ ಉಡುಪಿಯ ಮೂರು, ಮಂಗಳೂರಿನ ಎರಡು, ಬ್ರಹ್ಮಾವರ, ಸುರತ್ಕಲ್, ಪುತ್ತೂರು, ಕುಂದಾಪುರ ಹಾಗೂ ಶಿವಮೊಗ್ಗ ಮಳಿಗೆಗಳಲ್ಲಿ ನಡೆಯಲಿದೆ.
ಅಂತಾರಾಷ್ಟ್ರೀಯ ಕಂಪನಿಯ ಗೋದ್ರೇಜ್, ಒನಿಡಾ, ವೋಲ್ಟಾಸ್, ಐಎಫ್ಬಿ, ವರ್ಲ್ಪೂಲ್, ಸೋನಿ, ಪ್ಯಾನಸೋನಿಕ್, ಎಲ್ಜಿ, ಸ್ಯಾಮ್ಸಂಗ್, ಬೋಶ್, ಹೈಯರ್, ಲೀಭೇರ್, ಬ್ಲೂಸ್ಟಾರ್, ಆಪಲ್, ಹೆಚ್ಪಿ, ನಿಕಾನ್, ಪ್ರೆಸ್ಟಿಜ್, ಉಷಾ ಮೊದಲಾದ ಕಂಪೆನಿಗಳ ಅತ್ಯಾಧುನಿಕ ಗೃಹೋಪಕರಣಗಳು ವಿಶಾಲ ಶ್ರೇಣಿಯಲ್ಲಿ ಲಭ್ಯವಿದ್ದು, ಆಕರ್ಷಕ ಬೆಲೆಯಲ್ಲಿ ಲಾಭದಾಯಕ ಕೊಡುಗೆಗಳೊಂದಿಗೆ ದೊರೆಯುತ್ತಿರುವುದು ಹರ್ಷೋತ್ಸವದ ವಿಶೇಷತೆ.
ಇಷ್ಟೇ ಅಲ್ಲದೆ ವಿವಿಧ ಬ್ರಾಂಡ್ ನ ವಸ್ತುಗಳ ಮೇಲೆ 12000 ಕ್ಕೂ ಹೆಚ್ಚು ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ.
ಗೃಹಪಯೋಗಿ, ಹೆಲ್ತ್ ಕೇರ್ ಹಾಗೂ ಬ್ಯೂಟಿ ಕೇರ್ ಉತ್ಪನ್ನಗಳು, ಜೊತೆಗೆ ಇನ್ನಿತರ ಗೃಹೋಪಯೋಗಿ ವಸ್ತುಗಳು ಹತ್ತು ಹಲವಾರು ಕೊಡುಗೆಗಳೊಂದಿಗೆ ಗ್ರಾಹಕರ ಮನಸೆಳೆಯಲಿವೆ. ವಿಶ್ವ ವಿಖ್ಯಾತ ಬ್ರ್ಯಾಂಡ್ಗಳ ಉತ್ಕೃಷ್ಟ ವಸ್ತು ವೈವಿಧ್ಯಗಳ ವಿಶಾಲ ಶ್ರೇಣಿಯೇ ಹರ್ಷೋತ್ಸವದಲ್ಲಿದ್ದು, ಗ್ರಾಹಕರಿಗೆ ಒಂದೇ ಸೂರಿನಡಿಯಲ್ಲಿ ಆಯ್ಕೆ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ.
ಇಎಮ್ಐ ಮೂಲಕ ಖರೀದಿಸಿ, ಎಲ್ಜಿ ಎಲ್ಇಡಿ ಟಿವಿ, ಸೈಡ್-ಬೈ-ಸೈಡ್ ರೆಫ್ರಿಜರೇಟರ್, ವಾಶಿಂಗ್ ಮಶಿನ್, ಏರ್ ಕಂಡೀಷನರ್, ಮೈಕ್ರೋವೇವ್ ಓವನ್ ಗೆಲ್ಲಿರಿ ನಿಮ್ಮ ನೆಚ್ಚಿನ ಗೃಹೋಪಕರಣಗಳ ಖರೀದಿ ಇದೀಗ ಇನ್ನಷ್ಟು ಸುಲಭ, ಬಜಾಜ್ ಫೈನಾನ್ಸ್, ಹೆಚ್ಡಿಬಿ, ಹೆಚ್ಡಿಎಫ್ಸಿ, ಕೋಟಕ್ ಮಹೀಂದ್ರಾ ಬ್ಯಾಂಕ್ ಅಥವಾ ಐಡಿಎಫ್ಸಿ ಮೂಲಕ, ನಿಮ್ಮ ಕೈಗೆಟುಕುವ ಇಎಮ್ಐ ಯೋಜನೆಯಡಿ ನಿಮಗಿಷ್ಟವಾದ ಗೃಹೋಪಕರಣಗಳನ್ನು ಕೂಡಲೇ ಖರೀದಿಸಿ, ಬಡ್ಡಿ ರಹಿತ ಸುಲಭ ಕಂತುಗಳಲ್ಲಿ ನಂತರ ಪಾವತಿಸಿ. ಇದರೊಂದಿಗೆ ಈಬಾರಿ ವಿಶೇಷವಾಗಿ ಸುಲಭ ಕಂತು ಯೋಜನೆಯಡಿ ಖರೀದಿಸುವ ಗ್ರಾಹಕರಿಗೆ ಲಕ್ಕಿ ಡ್ರಾ ಮೂಲಕ ಎಲ್ಜಿ ಸಂಸ್ಥೆಯ 75 ಎಲ್ಇಡಿ ಟಿವಿ, ಸೈಡ್-ಬೈ-ಸೈಡ್ ರೆಫ್ರಿಜರೇಟರ್, ವಾಶಿಂಗ್ ಮಶಿನ್, ಏರ್ ಕಂಡೀಷನರ್, ಮೈಕ್ರೋವೇವ್ ಓವನ್ ಗೆಲ್ಲುವ ಅವಕಾಶ ಪಡೆಯಬಹುದು.
ವಿವಿಧ ಬ್ಯಾಂಕ್ಗಳ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮುಖೇನ ಖರೀದಿಯೊಂದಿಗೆ 15% ವರೆಗೆ ಕ್ಯಾಶ್ಬ್ಯಾಕ್ ದೊರೆಯಲಿದೆ. ಎಸ್ಬಿಐ ಕಾರ್ಡ್ ಮೂಲಕ ಶಾಪಿಂಗ್ ಮಾಡಿದಲ್ಲಿ ವಿಶೇಷವಾಗಿ 7.5% ವರೆಗಿನ ಕ್ಯಾಶ್ ಲಭ್ಯವಿದೆ. ಇದರೊಂದಿಗೆ ಇನ್ನೂ ಹಲವಾರು ರೀತಿಯ ಆಕರ್ಷಕ ಖರೀದಿ ಯೋಜನೆಗಳು ಮತ್ತು ಸೌಲಭ್ಯಗಳನ್ನು ಗ್ರಾಹಕರು ಪಡೆಯಬಹುದಾಗಿದೆ.