ಉಡುಪಿ,ಡಿ 19 (MSP): ಮರಳು ತೆಗೆಯಲು ನೀಡಿದ ಪರವಾನಿಗೆಯಂತೆ ಇನ್ನೂ ಮರಳುಗಾರಿಗೆ ಪ್ರಾರಂಭಿಸದ ಪರವಾನಿಗೆದಾರರ ಲೈಸೆನ್ಸ್ ನ್ನು ರದ್ದುಗೊಳಿಸಲಾಗುವುದು ಎಂದು, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಡಿ.19 ರಂದು ಮಾದ್ಯಮಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದ ಜಿಲ್ಲಾಧಿಕಾರಿ ಈಗಾಗಲೇ 45 ಮಂದಿ ಅರ್ಹತೆ ಪಡೆದವರಲ್ಲಿ 33 ಮಂದಿ ರಾಜಧನ ಪಾವತಿಸಿ ಪರವಾನಿಗೆ ಪಡೆದುಕೊಂಡಿದ್ದಾರೆ. ಪರವಾನಿಗೆದಾರರಿಗೆ ಡಿಸೆಂಬರ್ 17 ಕ್ಕೆ ಮರಳು ತೆಗೆಯಲು ಆರಂಭಿಸಲು ಕೊನೆಯ ದಿನವಾಗಿದ್ದು, ಅದರಂತೆ ಯಾವ ಮರಳು ಪರವಾನಿಗೆದಾರರು ಕೆಲಸ ಪ್ರಾರಂಭಿಸಲಿಲ್ಲವೋ ಅವರ ಲೈಸೆನ್ಸ್ ರದ್ದಾಗುತ್ತದೆ. ಇಂದಿನಿಂದಲೇ ಕಾರಣ ಕೇಳಿ ನೋಟೀಸ್ ನೀಡಲು ಪ್ರಾರಂಭಿಸುತ್ತೇವೆ. ಒಂದಿಷ್ಟೂ ಮಂದಿ ಸುಖಾಸುಮ್ಮನೆ ಮರಳು ತೆಗೆಯಲು ಬೇರೆ ಕಡೆ ಅವಕಾಶ ಮಾಡಿಕೊಡುವಂತೆ ಒತ್ತಾಯಿಸುತ್ತಾರೆ ಅದಕ್ಕೊಂದಿಷ್ಟು ಹಲವಾರು ಕಾರಣಗಳನ್ನು ಕೊಡುತ್ತಿದ್ದಾರೆ ಒಂದು ವೇಳೆ ಮರಳು ತೆಗೆಯುವ ಕಾರ್ಯ ಆರಂಭಿಸದಿದ್ದರೆ ಅಂಥವರ ಲೈಸೆನ್ಸ್ ಶಾಶ್ವತವಾಗಿ ರದ್ದುಪಡಿಸಲಾಗುತ್ತದೆ.
ಈಗಿರುವ 16000 ಮೆಟ್ರಿಕ್ ಟನ್ ಮರಳನ್ನು ನಿಗದಿ ಪಡಿಸಿದ ದಿನಾಂಕದೊಳಗೆ ತೆಗೆಯಬೇಕು, ಅದು ಮುಗಿಯುತ್ತಲೇ ಬೆಥೆಮೆಟಿಕ್ ಸಮೀಕ್ಷೆ ಪ್ರಕ್ರಿಯೆ ಆರಂಭಗೊಳ್ಳುತ್ತದೆ. ಗುರುವಾರದಿಂದ ಒಂದು ತಂಡ ಸಮಿಕ್ಷೆಗೆ ಮಾಡತೊಡಗುತ್ತದೆ. ನಾನ್ ಸಿ ಆರ್ ಜಡ್ ಮತ್ತು ಸಿ ಆರ್ ಜಡ್ ಇವೆರಡೂ ಒಟ್ಟಿಗೆ ಬಂದಿರೋದ್ರಿಂದ ಸ್ವಲ್ಪ ಸಮಸ್ಯೆಯಾಗ್ತಿದೆ. ಈಗ ಕೆಲವರು ದಕ್ಕೆ ಸಿಗುತ್ತಿಲ್ಲ ಎನ್ನುವ ಅನ್ನುವ ನೆಪ ಹೇಳುತ್ತಿದ್ದಾರೆ. ಸಿ ಆರ್ ಜಡ್ ಗೆ ಯಾವುದೇ ಹಣವನ್ನು ನಿಗದಿ ಮಾಡಿಲ್ಲ. ಎಲ್ಲಾ ಪರವಾನಿಗೆದಾರರಿಂದ ನಿರ್ಮಿತಿ ಕೇಂದ್ರದ ಮೂಲಕ 10% ಖರೀದಿ ಮಾಡುತ್ತಿದ್ದೇವೆ. ಮರಳು ಶೇಖರಿಸಲು ನೇಜಾರಿನಲ್ಲಿ ಒಂದು ಸ್ಟಾ ಕ್ಯಾರ್ಡ್ ಗುರುತಿಸಲಾಗಿದೆ. ಒಂದು ಲೋಡ್ (3 ಯುನಿಟ್) ಮರಳಿಗೆ 6500 ರೂ ಮಾರಾಟ ಮಾಡಲಾಗುವುದು ಎಂದು ತಿಳಿಸಿದರು.
ಉಡುಪಿ ತಾಲೂಕಿನಲ್ಲಿ ಸ್ವರ್ಣ ನದಿಯಲ್ಲಿ ಉಪ್ಪೂರು-ಶಿವಳ್ಳಿ, ಉಪ್ಪೂರು, ಹಾರಾಡಿ, ಉಪ್ಪೂರು-ಮೂಡುತೋನ್ಸೆ, ಹೀಗೆ ಐದು ಕಡೆ ಮರಳು ದಿಬ್ಬಗಳನ್ನು ಗುರುತಿಸಲಾಗಿದೆ. ಮರಳು ಸಿಗದೆ ಹಲವಾರು ತಿಂಗಳುಗಳಿಂದ ಪರದಾಡುತ್ತಿದ್ದ ಕರಾವಳಿಯ ಜನರಿಗೆ ಇದೀಗೆ ಸ್ವಲ್ಪ ಪರಿಹಾರ ಸಿಕ್ಕಿದಂತಾಗಿದೆ.