ಉಡುಪಿ, ಮಾ 13 (DaijiworldNews/HR): ಶಿರ್ವದ ಸೈಂಟ್ ಮೇರಿಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ.ಪಾಸ್ಕಲ್ ವಾಲ್ಟರ್ ಡೆಸಾ ಅವರು ಮಾರ್ಚ್ 13ರ ಭಾನುವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಬಂಟ್ವಾಳ ಮೂಲದ ಇವರು 1980ರಲ್ಲಿ ಶಿರ್ವದ ಸೈಂಟ್ ಮೇರಿಸ್ ಕಾಲೇಜಿಗೆ ಉಪನ್ಯಾಸಕರಾಗಿ, ವಾಣಿಜ್ಯ ವಿಭಾಗದ ಮುಖ್ಯಸ್ಥರಾಗಿ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿಯಾಗಿ, ಹಳೆ ವಿದ್ಯಾರ್ಥಿ ಸಂಘದ ಸಂಯೋಜಕರಾಗಿ, ಮಧ್ಯಾಹ್ನದ ಊಟ ಯೋಜನೆಯ ನಿರ್ದೇಶಕರಾಗಿ ಹಾಗೂ ಕಾಲೇಜಿನ ಎನ್ಸಿಸಿ ಅಧಿಕಾರಿಯಾಗಿ 35 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ಪರೀಕ್ಷಾ ವೇದಿಕೆಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು 29 ವರ್ಷಗಳ ಕಾಲ ಶಿರ್ವದ ಸೇಂಟ್ ಮೇರಿಸ್ ಕಾಲೇಜಿನ ಎನ್ಸಿಸಿ ಅಧಿಕಾರಿಯಾಗಿದ್ದರು. ಎನ್ಸಿಸಿ ಅಧಿಕಾರಿಯಾಗಿ ಕಸ್ತೂರ ಬಾ ಆಸ್ಪತ್ರೆ ಮಣಿಪಾಲ ಮತ್ತು ಉಡುಪಿ ಜಿಲ್ಲಾ ಆಸ್ಪತ್ರೆ ರಕ್ತನಿಧಿಗಳ ಸಹಯೋಗದಲ್ಲಿ 24 ರಕ್ತದಾನ ಶಿಬಿರಗಳನ್ನು ಆಯೋಜಿಸಿದ್ದರು. ಅವರು ಮಾರ್ಚ್ 2015 ರಲ್ಲಿ ಸೇವೆಯಿಂದ ನಿವೃತ್ತರಾದರು.
ಪಾಸ್ಕಲ್ ವಾಲ್ಟರ್ ಡೆಸಾ ಅವರು ಪತ್ನಿ ನಿವೃತ್ತ ಶಿಕ್ಷಕಿ ಪ್ರಫುಲ್ಲಾ ಡೆಸಾ, ಪುತ್ರ ಮೂಳೆ ಶಸ್ತ್ರ ಚಿಕಿತ್ಸಕ ಡಾ. ಪ್ರಶಾಂತ್ ಡೆಸಾ ಮತ್ತು ಮಗಳು ಡಾ. ಪ್ರೀಮಾ ಡೆಸಾ ಅವರನ್ನು ಅಗಲಿದ್ದಾರೆ.