ಉಡುಪಿ, ಮಾ 11 (DaijiworldNews/DB): ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಮುದರಂಗಡಿ ಪಂಚಾಯತ್ ವ್ಯಾಪ್ತಿಯ ಮೂಡು ದಡ್ಡು ದಿವಂಗತ ಜಾಜ್೯ ಮೆಂಡೋನ್ಸಾ ಕಾಂಕ್ರೀಟ್ ರಸ್ತೆಯನ್ನು ಶಾಸಕ ಲಾಲಾಜಿ ಆರ್. ಮೆಂಡನ್ ಉದ್ಘಾಟಿಸಿದರು.
ಈ ರಸ್ತೆ ಕಾಂಕ್ರಿಟೀಕರಣಗೊಳ್ಳಬೇಕೆಂಬುದು ಕ್ರಿಶ್ಚಿಯನ್ ಕುಟುಂಬಗಳ ಸುಮಾರು ಇಪ್ಪತ್ತೈದು ವರ್ಷಗಳ ಬೇಡಿಕೆಯಾಗಿತ್ತು.
ರಸ್ತೆಗೆ ಅನುದಾನ ತರುವಲ್ಲಿ ಶ್ರಮಿಸಿದ ಸೂಡ ಶಂಕರ್ ಕುಂದರ್, ಸ್ಥಳೀಯರಾದ ಫ್ರೀಡಾ ಮೆಂಡೋನ್ಸಾ, ಕಂಟ್ರಾಕ್ಟುದಾರ ಅಂಬಿಕಾ ಪ್ರಸಾದ್ ವಿಜಯಕೃಷ್ಣ ಸೂಡ , ಜಗದೀಶ್ ಆಚಾರ್ಯ, ಮುದರಂಗಡಿ ಪಂಚಾಯತ್ ಸದಸ್ಯ ಶಿವರಾಮ್ ಭಂಡಾರಿ, ಮುದರಂಗಡಿ ಹಾಲು ಉದ್ಪಾದಕರ ಸಂಘದ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಹಿರಿಯ ನಾಗರಿಕ ಡೇವಿಡ್ ಕೊರೆಯಾ ಮತ್ತಿತರರು ಉಪಸ್ಥಿತರಿದ್ದರು.
ಫಿಲೊಮಿನಾ ಮೆಂಡೋನ್ಸಾ ಸ್ವಾಗತಿಸಿ, ಫಾ. ಜೆರೋಂ ಮೊಂತೇರೋ ವಂದಿಸಿದರು. ಜೇರಿ ಎಲ್. ಡಿ ಸೋಜ ನಿರೂಪಿಸಿದರು.