ಉಡುಪಿ, ಮಾ 12 (DaijiworldNews/MS): ಆನ್ಲೈನ್ ವಂಚನೆಗೆ ಒಳಗಾಗಿ ವ್ಯಕ್ತಿಯೋರ್ವರು 10,71,938 ರೂಪಾಯಿ ಕಳೆದುಕೊಂಡಿದ್ದು, ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೀಜಾಡಿ ನಿವಾಸಿ ಆದಮ್ ಬ್ಯಾರಿ ಜನವರಿ 18 ರಂದು NAAPTOL ಆನ್ಲೈನ್ ಶಾಪಿಂಗ್ ಸ್ಕ್ರ್ಯಾಚ್ ಕಾರ್ಡ್ ಮತ್ತು ವಿನ್ ಕಾರ್ಡ್ ಅಂಚೆ ಮೂಲಕ ಬಂದಿದೆ. ಇದರಲ್ಲಿ ಅವರು 11.5 ಲಕ್ಷ ರೂ ಬಹುಮಾನ ಬಂದಿದೆ ಎಂದು ನಮೂದಿಸಲಾಗಿತ್ತು.
ಸ್ಕ್ರ್ಯಾಚ್ ಕಾರ್ಡ್ನಲ್ಲಿ ನಮೂದಿಸಲಾದ 8334850744 ಸಂಖ್ಯೆಗೆ ಕರೆ ಮಾಡಿದಾಗ, ಇನ್ನೊಂದು ಮೊಬೈಲ್ ನಂಬರ್ 8101542763 ನ್ನು ನೀಡಿ ಕಾರ್ಡ್ ನ್ನು ವಾಟ್ಸ್ ಅಪ್ ಮಾಡುವಂತೆ ತಿಳಿಸಿದ್ದಾರೆ.
ನಂತರದಲ್ಲಿ NAAPTOL ಸಂಸ್ಥೆಯವರು ಎಂಬುದಾಗಿ ನಂಬಿಸಿ ಕರೆಯನ್ನು ಮಾಡಿ ಹಾಗೂ ವಾಟ್ಸ್ಆಪ್ ಮುಖೇನಾ ಟಿ.ಡಿ.ಎಸ್ ಹಾಗೂ ಬೇರೆ ಬೇರೆ ಕಾರಣಗಳಿಂದ ಹಂತ ಹಂತವಾಗಿ ದೂರುದಾರರಿಂದ ಒಟ್ಟು ರೂ. 10,71,938 ರೂನ್ನು ಆರೋಪಿಗಳು ವಿವಿಧ ಬ್ಯಾಂಕ್ ಖಾತೆಗಳಿಗೆ ಡಿಪಾಸಿಟ್ ಮಾಡಿಸಿಕೊಂಡು, ಬಹುಮಾನದ ಹಣವನ್ನು ನೀಡದೆ, ಡಿಪಾಸಿಟ್ ಮಾಡಿಸಿಕೊಂಡ ಹಣವೂ ನೀಡದೆ ವಂಚನೆ ಎಸಗಿದ್ದಾರೆ ಎಂದು ದೂರು ನೀಡಿದ್ದಾರೆ.
ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 10/2022 ಕಲಂ 66(c), 66(d) ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಿಸಲಾಗಿದೆ.