ಮಂಗಳೂರು,ಡಿ 19 (MSP): ಕ್ರಿಸ್ಮಸ್ ಹಬ್ಬ ಹಾಗೂ ಶಾಲಾ ಮಕ್ಕಳಿಗೆ ಕ್ರಿಸ್ಮಸ್ ರಜೆ ಹತ್ತಿರವಾಗುತ್ತಿದ್ದಂತೆ ದೂರದೂರಿನಲ್ಲಿರುವ ಮಂದಿ ತಮ್ಮ ಊರಿನತ್ತ ಮುಖ ಮಾಡಿದ್ದು, ಪ್ರಯಾಣಿಕರನ್ನು ದೋಚಲು ಇದೇ ಸರಿಯಾದ ಸಮಯ ಎಂದು ಅಲ್ಲದೆ್ಹೆಚ್ಚು ದುಡ್ಡು ಮಾಡಲು ಇದೇ ಸಕಾಲ ಎಂದು ಖಾಸಗಿ ಬಸ್ ಗಳು ನಾಲ್ಕು ಪಟ್ಟು ದರದಲ್ಲಿ ಏರಿಕೆ ಮಾಡಿದೆ.
ಈ ಹಿಂದೆ ದಸರಾ, ದೀಪಾವಳಿ, ಗಣೇಶ ಚತುರ್ಥಿ, ಮೊದಲಾದ ಹಬ್ಬಗಳ ಸೀಸನ್ ನಲ್ಲಿ ಮೂರು ಪಟ್ಟು ಹೆಚ್ಚು ದರ ಏರಿಕೆ ಮಾಡಿದ್ದ ಖಾಸಗಿ ಬಸ್ ಗಳು ಇದೀಗ ಒಂದು ಹೆಜ್ಜೆ ಮುಂದೆ ಹೋಗಿದೆ.
ಸಾಮಾನ್ಯವಾಗಿ ಖಾಸಗಿ ಬಸ್ ಗಳಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಸುಮಾರು ೮೦೦- ೯೦೦ ರೂ ಗರಿಷ್ಟ ದರ ಇರುತ್ತದೆ. ಆದರೆ ಡಿ ೨೨ ರಿಂದು ಬೆಂಗಳೂರಿನಿಂದ ಮಂಗಳೂರಿಗೆ ಆನ್ ಲೈನ್ ನಲ್ಲಿ ಬಸ್ ನುಕ್ ಮಾಡಬೇಕಾದರೆ ಗರಿಷ್ಟ ದರ ೩೪೫೦ ರೂ ಪಾವತಿಸುವಂತೆ ಹೇಳಲಾಗುತ್ತಿದೆ.