ಮಂಗಳುರು, ಮಾ. 11 (DaijiworldNews/SM): ಗೂಗಲ್ ನಲ್ಲಿ ಕಸ್ಟಮರ್ ಕೇರ್ ನಂಬರ್ ಎಂದು ಹುಡುಕಿ ಕರೆ ಮಾಡಿದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಸರಿಸುಮಾರು ಎರಡು ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ.
ಪ್ರತಿನಿತ್ಯ ಮೊಬೈಲ್ ಗೆ ಅನೇಕ ಸಂದೇಶಗಳು ಬರುತ್ತಿರುತ್ತವೆ. ಹೀಗೆ ಬಂದ ಸಂದೇಶವೊಂದಕ್ಕೆ ಪ್ರತಿಕ್ರಿಯಿಸಿ ಹಣ ಕಳೆದುಕೊಂಡವರು ಅನೇಕರಿದ್ದಾರೆ. ಇದೀಗ ಗೂಗುಲ್ ನಲ್ಲಿ ಕಸ್ಟಮರ್ ಕೇರ್ ನಂಬರ್ ಸರ್ಚ್ ಮಾಡಿ ಕರೆ ಮಾಡಿದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ವಂಚನೆಗೊಳಗಾಗಿರುವ ಘಟನೆ ನಡೆದಿದೆ. ಗೂಗಲ್ ಸರ್ಚ್ ಸಂದರ್ಭ ದೊರೆತ ಸಂಖ್ಯೆಯನ್ನು ನಂಬಿ ಕರೆ ಮಾಡಿದ ಸಂದರ್ಭದಲ್ಲಿ ಬರೋಬ್ಬರಿ 1.92 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ಇದೀಗ ಗೂಗಲ್ ನಲ್ಲೂ ಫೇಕ್ ಕಸ್ಟಮರ್ ನಂಬರ್ ಬಳಸಿಕೊಂಡು ವಂಚನೆ ನಡೆಸಲು ವಂಚಕರು ಮುಂದಾಗಿರುವ ವಿಚಾರ ಬೆಳಕಿಗೆ ಬಂದಿದೆ. ಆ ಮೂಲಕ ಸಾರ್ವಜನಿಕರನ್ನು ವಂಚಿಸುವ ಜಾಲವೊಂದು ಸಕ್ರೀಯಗೊಂಡಿದ್ದು, ಸಾರ್ವಜನಿಕರು ಎಚ್ಚರದಿಂದಿರಬೇಕಾಗಿದೆ.