ನವದೆಹಲಿ,ಡಿ 19 (MSP): 2019 ರ ಜನವರಿ 1 ರಿಂದ ಕೇಬಲ್ ಮತ್ತು ಡಿಟಿಎಚ್ಗಳಿಗೆ ಹೊಸ ದರ ವ್ಯವಸ್ಥೆ ಜಾರಿಯಾಗಲಿದ್ದು, ಇದರ ಅನುಸಾರ ಹೊಸ ವರ್ಷದ ಮೊದಲ ದಿನವೇ ಟಿವಿ ಸೆಟ್ಗಳಲ್ಲಿ ಬಹುತೇಕ ಚಾನೆಲ್ ಗಳು ಮಾಯಾವಾಗಬಹುದು. ಗ್ರಾಹಕರು ಸದ್ಯ ವಿನೂತನ ದರ ವ್ಯವಸ್ಥೆಗೆ ಬದಲಾವಣೆಗೊಳ್ಳದಿದ್ದರೆ ಮೂರ್ಖರ ಪೆಟ್ಟಿಗೆ ಮುಂದೆ ಮೂರ್ಖರಾಗುವುದು ಖಚಿತ. ಯಾಕೆಂದರೆ ಆ ಬಳಿಕ ಟಿ.ವಿಯಲ್ಲಿ ಏನೂ ಬರುವುದಿಲ್ಲ!
ಈ ವಿನೂತನ ವ್ಯವಸ್ಥೆಯಂತೆ ಕೇಬಲ್ ಮತ್ತು ಡಿಟಿಎಚ್ ಆಪರೇಟರ್ಗಳು ಗ್ರಾಹಕರ ಆಯ್ಕೆ ಮಾಡಿದ ಚಾನೆಲ್ಗಳನ್ನು ಮಾತ್ರ ನೀಡಬೇಕು. ಚಾನೆಲ್ಗಳ ಆಯ್ಕೆಗೆ ತಕ್ಕಂತೆ ಮಾತ್ರ ಹಣವನ್ನು ಪಾವತಿಸಬೇಕಾಗುತ್ತದೆ. ಹೀಗಾಗಿ ಇನ್ಮುಂದೆ ಆಪರೇಟರ್ಗಳು ಅವರ ಮನಸೋಇಚ್ಚೆ ಚಾನೆಲ್ಗಳನ್ನು ಗ್ರಾಹಕರ ಮೇಲೆ ಬಲವಂತವಾಗಿ ಹೇರುವುದನ್ನು ತಪ್ಪಿದಂತಾಗುತ್ತದೆ.
ಕೇಬಲ್ ಮತ್ತು ಡಿಟಿಎಚ್ ಬ್ರಾಡ್ಕಾಸ್ಟ್ ಕಂಪನಿಗಳು ಟ್ರಾಯ್ ಜಾರಿಗೆ ತರಲಿರುವ ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದೆ. ಅಲ್ಲದೆ ಟ್ರಾಯ್ ಜಾರಿಗೆ ತಂದ ಹೊಸ ವ್ಯವಸ್ಥೆಗೆ ಆಪರೇಟರ್ಗಳು ಅವುಗಳಿಗೆ ಬೇಕಾದ ಅಗತ್ಯ ಸಾಫ್ಟ್ವೇರ್ ಮತ್ತು ವೆಬ್ ಪೋರ್ಟಲ್ ವ್ಯವಸ್ಥೆಯ ಮಾಡಿಕೊಂಡಿಲ್ಲ. ಹೀಗಾಗಿ ಸಮಸ್ಯೆಯಾಗುವ ಎಲ್ಲಾ ಸಾಧ್ಯತೆಗಳಿವೆ. ಅದ್ದರಿಂದ ಜ.1ರ ನಂತರ ದೂರದರ್ಶನದ 26 ಚಾನೆಲ್ಗಳು ಮಾತ್ರ ಗ್ರಾಹಕರಿಗೆ ಸಿಗಬಹುದಾಗಿದೆ. ಆದರೆ ಖಾಸಗಿ ಚಾನೆಲ್ಗಳು ಪ್ರಸಾರವಾಗುವುದಿಲ್ಲ.
ಇನ್ನು ಟ್ರಾಯ್ ತಂದ ವಿನೂತನ ವ್ಯವಸ್ಥೆ ಜಾರಿ ಮಾಡಿದ್ರೆ ಗ್ರಾಹಕರ ಹೆಚ್ಚನ ಹೊರೆ ಬೀಳುತ್ತದೆ. ಅಲ್ಲದೆ ಇದನ್ನು ತಕ್ಷಣಕ್ಕೆ ಜಾರಿಗೊಳಿಸುವುದು ಕಷ್ಟವಾಗುತ್ತದೆ ಎಂದು ಕೇಬಲ್ ಆಪರೇಟರ್ಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ನೂತನ ದರ ಜಾರಿಗೆ ಬಂದ ನಂತರ ಗ್ರಾಹಕರು 100 ಚಾನೆಲ್ಗಳನ್ನು ಆಯ್ಕೆ ಮಾಡಬಹುದು. ಇದರಲ್ಲಿ ದೂರದರ್ಶನದ 26 ಚಾನೆಲ್ಗಳು ಕಡ್ಡಾಯ ಆಯ್ಕೆ ಆಗಿರುತ್ತದೆ. ಇದರ ದರ ಮಾಸಿಕವಾಗಿ 130 ಮತ್ತು ಶೇ 18 ಜಿಎಸ್ಟಿ ಒಳಗೊಂಡಿದೆ. ಇದರೊಂದಿಗೆ 20 ರೂಪಾಯಿಗೆ 25 ಉಚಿತವಾಗಿ ಪ್ರಸಾರ ಮಾಡುವ ಚಾನೆಲ್ಗಳನ್ನು ನೀಡಲಾಗುತ್ತದೆ.ಇದನ್ನು ಹೊರತುಪಡಿಸಿ ಬೇರೆ ಯಾವುದೇ ಚಾನೆಲ್ ಬೇಕಿದ್ದರೂ ತಮಗಿಷ್ಟ ಚಾನೆಲೆ ಅಯ್ಕೆ ಮಾಡಿ ಬ್ರಾಡ್ಕಾಸ್ಟರ್ಗಳು ನಿಗದಿ ಮಾಡಿದಷ್ಟು ದರವನ್ನು ನೀಡಬೇಕಾಗುತ್ತದೆ.