ಉಡುಪಿ, ಮಾ 10 (DaijiworldNews/DB): ಮಲ್ಪೆ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದ ವೇಳೆ ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಗರಗಸ ಮೀನೊಂದು ಬೋಟ್ ನಲ್ಲಿ ಸಿಲುಕಿಕೊಂಡಿದೆ.
ಈ ಮೀನಿನ ತೂಕ ಸುಮಾರು 250 ಕೆಜಿ ಇದ್ದು, ಮೀನನ್ನು ನೋಡಲೆಂದು ಹಾರ್ಬರ್ ನೊಳಗೆ ಹಲವಾರು ಮಂದಿ ಸೇರಿದ್ದರು. ಬಳಿಕ ಕ್ರೈನ್ ನ ಸಹಾಯದಿಂದ ಬೋಟ್ ನಿಂದ ಮೀನನ್ನು ಮೇಲಕೆತ್ತಿ ಲಾರಿಯಲ್ಲಿ ತುಂಬಿಸಿ ಮಂಗಳೂರಿಗೆ ಕಳುಹಿಸಿಕೊಡಲಾಯಿತು ಎಂದು ತಿಳಿದು ಬಂದಿದೆ.
ಈ ಜಾತಿಯ ಮೀನುಗಳು ಸಮುದ್ರದಲ್ಲಿ ಉಷ್ಣವಲಯ ಮತ್ತು ಉಪೋಷ್ಣವಲಯದಲ್ಲಿ ವಾಸಿಸುತ್ತವೆ ಎನ್ನಲಾಗಿದೆ.