ಬೆಂಗಳೂರು, ಡಿ 18(SM): 2019ನೇ ಸಾಲಿನ ದ್ವಿತೀಯ ಪಿಯುಸಿಯ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟಗೊಂಡಿದೆ. ಪಿಯು ಪರೀಕ್ಷಾ ಮಂಡಳಿ ವೇಳಾಪಟ್ಟಿ ಪ್ರಕಟಿಸಿದ್ದು, ಮಾರ್ಚ್ 1ರಿಂದ 18ರ ವರೆಗೆ ಪರೀಕ್ಷೆಗಳು ನಡೆಯಲಿವೆ.
ಇನ್ನು ಈ ಪರೀಕ್ಷಾ ವೇಳಾಪಟ್ಟಿಗೆ ತಕರಾರು ಸಲ್ಲಿಸಲು ಅವಕಾಶವಿತ್ತು. ನವೆಂಬರ್ 28ರ ಒಳಗೆ ತಕರಾರು ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ತಕರಾರು ಪಟ್ಟಿ ಪರಿಶೀಲನೆ ಬಳಿಕ ಅಂತಿಮ ವೇಳಾಪಟ್ಟಿ ಪ್ರಕಟ ಮಾಡಲಾಗಿದೆ. ಪರೀಕ್ಷೆಗಳು ಬೆಳಗ್ಗೆ 10:15 ರಿಂದ 1:30 ರವರೆಗೆ ನಡೆಯಲಿವೆ.
ಪಿಯುಸಿ ವೇಳಾಪಟ್ಟಿ:
01 ಮಾರ್ಚ್ 2019- ಅರ್ಥಶಾಸ್ತ್ರ, ಭೌತಶಾಸ್ತ್ರ
02 ಮಾರ್ಚ್ 2019- ಮಾಹಿತಿ ತಂತ್ರಜ್ಞಾನ
06 ಮಾರ್ಚ್ 2019- ತರ್ಕಶಾಸ್ತ್ರ, ಭೂಗರ್ಭ ಶಾಸ್ತ್ರ, ಶಿಕ್ಷಣ, ಗೃಹ ವಿಜ್ಞಾನ
07 ಮಾರ್ಚ್ 2019- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಗಣಿತ
08 ಮಾರ್ಚ್ 2019- ಸಂಸ್ಕೃತ, ಉರ್ದು
09 ಮಾರ್ಚ್ 2019- ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
11 ಮಾರ್ಚ್ 2019- ವ್ಯವಹಾರ ಅಧ್ಯಯನ, ಸಮಾಜಶಾಸ್ತ್ರ, ರಸಾಯನಶಾಸ್ತ್ರ
12 ಮಾರ್ಚ್ 2019- ಭೂಗೋಳ ಶಾಸ್ತ್ರ, ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ
13 ಮಾರ್ಚ್ 2019- ಮನಃಶಾಸ್ತ್ರ, ಎಲೆಕ್ಟ್ರಾನಿಕ್ಸ್, ಗಣಿತ ವಿಜ್ಞಾನ
14 ಮಾರ್ಚ್ 2019- ಇತಿಹಾಸ, ಜೀವಶಾಸ್ತ್ರ, ಬೇಸಿಕ್ ಮ್ಯಾಥ್ಸ್
15 ಮಾರ್ಚ್ 2019- ಹಿಂದಿ
16 ಮಾರ್ಚ್ 2019- ಕನ್ನಡ
18 ಮಾರ್ಚ್ 2019- ಇಂಗ್ಲೀಷ್