ಬಂಟ್ವಾಳ, ಮಾ 10 (DaijiworldNews/HR): ಶೀನ ಶೆಟ್ಟಿ ಮತ್ತು ಕೃಷ್ಣ ಮೂಲ್ಯ ಅವರ ಸೇವಾ ಕಥನ ಅದ್ವಿತೀಯ ಕೃತಿ ಲೋಕಾರ್ಪಣೆ ಕಾರ್ಯಕ್ರಮ ಬಂಟ್ವಾಳ ತಾಲೂಕಿನ ಬಾಳೆಪುಣಿಯ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಾಳೆಪುಣಿಯ ಜನಜೀವನ ಅವರ ಆಶ್ರಯದಲ್ಲಿ ಲೇಖಕ ನರೇಂದ್ರ ರೈ ದೇರ್ಲ ಅವರ ʼಅದ್ವಿತೀಯʼ ಕೃತಿ ಲೋಕಾರ್ಪಣಾ ಸಮಾರಂಭ ಭಾನುವಾರ ನಡೆಯಿತು.
ಲೇಖಕ ನರೇಂದ್ರ ರೈ ದೇರ್ಲ ಅವರು ಅದ್ವಿತೀಯದ ಹಿನ್ನೋಟ ತಿಳಿಸಿದರು. ವಿಧಾನಸಭೆ ವಿಪಕ್ಷ ನಾಯಕ ಯು. ಟಿ ಖಾದರ್ ಸಮಾರಂಭ ಉದ್ಗಟಿಸಿದರು, ಜನಜೀವನ ಅಧ್ಯಕ್ಷ ರಮೇಶ್ ಕೆ ಶೇಣವ ಅಧ್ಯಕ್ಷತೆ ವಹಿಸಿದ್ದು,ಪ್ರೋ. ಬಿ ನಿತಾನಂದ ಶೆಟ್ಟಿ ಕೃತಿ ಪರಿಚಯಿಸಿದರು.
ಸೇವಾ ಬದುಕು ಛಾಯಾ ಚಿತ್ರಗಳನ್ನು ನವ ಸಾಕ್ಷರೆ ಯಶೋಧಾ ಲ್ಯಾಲ ಅನಾವರಣಗೊಳಿಸಿದರು. ಮೈಸೂರು ಇಲೆಕ್ಟ್ರೀಕಲ್ ಇಂಡಸ್ಟ್ರೀಸ್ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಜಿ.ಪಂ ಮಾಜಿ ಅಧ್ಯಕ್ಷೆ ಮಮತಾ, ತಾ.ಪಂ ಮಾಜಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಬಾಳೆಪುಣಿ ಗ್ರಾ.ಪಂ ಅಧ್ಯಕ್ಷೆ ರಯೀಯಾ , ಶಿವಪ್ರಸಾದ್ ಆಳ್ವ ಮುಖ್ಯ ಅಥಿತಿಗಳಾಗಿದ್ದರು.
ಇನ್ನು ಸಮಾಜ ಸೇವಕರಾದ ಶೀನ ಶೆಟ್ಟಿ ಮತ್ತು ಕೃಷ್ಣ ಮೂಲ್ಯ ತಮ್ಮ ಜೀವನಾನುಭವ ಹಂಚಿಕೊಂಡರು.