ಮಂಗಳೂರು, ಮಾ 10 (DaijiworldNews/MS): 'ಮಹಿಳೆಯರ ಆರ್ಥಿಕ ಸ್ಥಿತಿಗತಿಗಳ ಏಳಿಗಾಗಿ ಮೀನು ಮಾರಾಟ ಫೆಡರೇಶನ್ ಶ್ರಮಿಸುತ್ತಿದೆ' ಎಂದು ಅಂಬಲಪಾಡಿಯ ಪ್ಯಾಮಿಲಿ ಟ್ರಸ್ಟ್ (ರಿ) ಪ್ರವರ್ತಕ ಡಾ.ಜಿ. ಶಂಕರ್ ತಿಳಿಸಿದರು.
ಅವರು ನಗರದ ಉರ್ವಾದಲ್ಲಿರುವ ಮಾರಿಯಮ್ಮ ದೇವಸ್ಥಾನದ ಸಭಾಂಗಣದಲ್ಲಿ ಮಾ. 9ರ ಬುಧವಾರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ನಿಯಮಿತ ಮಂಗಳೂರು ಇದರ ಸಹಯೋಗದಲ್ಲಿ ಪಣಿಪಾಲ್ ನಿಗ್ನಾ ಪ್ರೋ ರೀಹೆಲ್ತ್ ಗ್ರೂಪ್ ಇನ್ಶುರೆನ್ಸ್ ಕಾರ್ಡ್, ವಿದ್ಯಾರ್ಥಿ ವೇತನ ಹಾಗೂ ಸದಸ್ಯ ಸಹಕಾರಿ ಸಂಘಗಳಿಗೆ ಪ್ರೋತ್ಸಾಹಕ ಉಡುಗೊರೆ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಮೀನು ಮಾರಾಟ ಫೆಡರೇಶನ್ ಕರಾವಳಿ ಜಿಲ್ಲೆಯ ಮೀನುಗಾರರ ಸಮಸ್ಯೆಗಳಿಗೆ ದ್ವನಿಯಾಗುವುದರೊಂದಿಗೆ ಸದಾ ಮಹಿಳಾ ಮೀನುಗಾರರ ಏಳಿಗೆಗಾಗಿ ಕೈಜೋಡಿಸಿದೆ, ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಿ ಅವರನ್ನಯ ಆರ್ಥಿಕವಾಗಿ ಸಶಕ್ತಗೊಳಿಸುತ್ತಿದೆ ಎಂದರು.
ನಂತರ ಸಂಘದ ಸದಸ್ಯರಿಗೆ ಸಹಾಯಧನ ಹಾಗೂ ಹೆಲ್ತ್ ಕಾರ್ಡ್ ವಿತರಿಸಲಾಯಿತು, ಜತೆಗೆ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿಯ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು. ಮೀನು ಮಾರಾಟ ಫೆಡರೇಶನ್ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಹರೀಶ್, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ನ ಅಧ್ಯಕ್ಷ ಯಶ್ಪಾಲ್ ಸುವರ್ಣ, ಜಿಲ್ಲಾ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ.ಸಿ ಕೋಟ್ಯಾನ್, ಡಿವಿಜನ್ ರಿಟೈಲ್ ಸೇಲ್ಸ್ ಹೆಡ್ ಮಧುಪ್ ದ್ವಿವೇದಿ, ಆಡಳಿತ ಮೊಕೇಸ್ತರರಾದ ದೇವಾನಂದ, ರಾಮಚಂದ್ರ ಬೈಕಂಪಾಡಿ, ಮತ್ಸೋದ್ಯಮಿ ಮೋಹನ್ ಬೆಂಗ್ರೆ, ಏಳುಪಟ್ಣ ಸಂಯುಕ್ತ ಸಭಾ ಅಧ್ಯಕ್ಷ ಗೌತಮ್ ಕೋಡಿಕಲ್ ಹಾಗೂ ಸಾರ್ವಜನಿಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.