ಮಂಗಳೂರು, ಮಾ 09 (DaijiworldNews/DB): ಯುದ್ಧಗ್ರಸ್ಥ ಉಕ್ರೇನ್ ನಲ್ಲಿ ಸಿಲುಕಿಕೊಂಡಿದ್ದ ದ.ಕ. ಜಿಲ್ಲೆಯ 18 ವಿದ್ಯಾರ್ಥಿಗಳು ಭಾರತಕ್ಕೆ ಆಗಮಿಸಿದ್ದು, ಈ ಪೈಕಿ 15 ಮಂದಿ ಸುರಕ್ಷಿತವಾಗಿ ತಮ್ಮ ಮನೆಗಳಿಗೆ ತಲುಪಿದ್ದಾರೆ. ಉಳಿದ ಮೂವರು ನವದೆಹಲಿ ಹಾಗೂ ಮುಂಬೈ ತಲುಪಿದ್ದು ಶೀಘ್ರ ಜಿಲ್ಲೆಗೆ ಆಗಮಿಸಲಿದ್ದಾರೆ.
ಮನೆಯವರೊಂದಿಗೆ ಲಾಯ್ಡ್ ಆಂಟನಿ ಪಿರೇರಾ (ಎಡದಿಂದ ಎರಡನೆಯವರು)
ಶೇಖ್ ಮಹಮ್ಮದ್ ತಾಹ, ಮೊಹಮ್ಮದ್ ಮಿಶಾಲ್ ಆರೀಫ್ ನವದೆಹಲಿ ತಲುಪಿದ್ದರೆ, ಅಂಶಿತಾ ರೇಶಲ್ ಪದ್ಮಶಾಲಿ ಮುಂಬೈಗೆ ಬಂದಿಳಿದಿದ್ದಾರೆ.
ಗುರುಪುರದ ನಿವಾಸಕ್ಕೆ ಮಾರ್ಚ್ 7ರಂದು ಆಗಮಿಸಿದ ಲಾಯ್ಡ್ ಆಂಟನಿ ಪಿರೇರಾ ಮಾಧ್ಯಮದವರೊಂದಿಗೆ ಮಾತನಾಡಿ, 'ಉಕ್ರೇನ್ ನಲ್ಲಿರುವಷ್ಟು ದಿನ ಭಯದಿಂದಲೇ ಜೀವಿಸಿದ್ದೆವು. ಎಷ್ಟೇ ಧೈರ್ಯ ತಂದುಕೊಂಡರೂ ಜೀವಭಯ ಕಾಡುತ್ತಲೇ ಇತ್ತು. ರೊಮೇನಿಯಾ ತಲುಪಿದ ಮೇಲಷ್ಟೇ ಭಯ ದೂರವಾಯಿತು’ ಎಂದು ಅಲ್ಲಿನ ಪರಿಸ್ಥಿತಿ ಬಗ್ಗೆ ಹಂಚಿಕೊಂಡರು.