ಮಂಗಳೂರು, ಮಾ 09 (DaijiworldNews/MS): ಎರಡು ಪ್ರತ್ಯೇಕ ಘಟನೆಗಳಲ್ಲಿ, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು 25.17 ಲಕ್ಷ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿ ನೋಟುಗಳನ್ನು ಪತ್ತೆ ಮಾಡಿದ್ದು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಮಾರ್ಚ್ 8 ಮಂಗಳವಾರ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದ ಮೂಲಕ ದುಬೈನಿಂದ ಇಲ್ಲಿಗೆ ಆಗಮಿಸಿದ ಪ್ರಯಾಣಿಕರೊಬ್ಬರ ಬಳಿ 17,77,500 ರೂಪಾಯಿ ಮೌಲ್ಯದ 90,000 ಯುಎಇ ದಿರ್ಹಾಮ್ಗಳು ಪತ್ತೆಯಾಗಿವೆ.
ಮತ್ತೊಂದು ಪ್ರಕರಣದಲ್ಲಿ, ಕೇರಳದ ಪ್ರಯಾಣಿಕರೊಬ್ಬರಿಂದ ₹ 7,40,500 ಮೌಲ್ಯದ US ಡಾಲರ್ 10,000 ವಶಪಡಿಸಿಕೊಳ್ಳಲಾಗಿದೆ.ಈತ ಮಂಗಳೂರಿನಿಂದ ಶಾರ್ಜಾಕ್ಕೆ ಪ್ರಯಾಣಿಸಲು ಆಗಮಿಸಿದ್ದ. ಈ ಪ್ರಕರಣಗಳಲ್ಲಿ ಆರೋಪಿಗಳಿಬ್ಬರನ್ನೂ ವಶಕ್ಕೆ ಪಡೆಯಲಾಗಿದೆ.