ಮಂಗಳೂರು, ಮಾ 09 (DaijiworldNews/MS): ಮಂಗಳೂರು ನಗರ ಸೇರಿದಂತೆ ಸುತ್ತಮುತ್ತಲೂ ಮಾ. 09 ರ ಬುಧವಾರ ಬೆಳಗ್ಗೆ ಏಕಾಏಕಿ ಜೋರಾಗಿ ಮಳೆ ಸುರಿದಿದೆ.
ಬುಧವಾರ ನಸುಕಿನ ಜಾವ ಎರಡು ಗಂಟೆಯಿಂದಲೇ ತಕ್ಕ ಮಟ್ಟಿಗೆ ಮಳೆ ಸುರಿಯುತ್ತಿದ್ದು, ಬಳಿಕ ಸುಮಾರು ಐದು ಗಂಟೆಯಿಂದ ಮುಂಜಾನೆ 7 ರವರೆಗೆ ಜೋರಾಗಿ ಮಳೆ ಸುರಿದಿದೆ. ನಗರ ಸೇರಿ ದ.ಕ. ಜಿಲ್ಲೆಯ ಹಲವೆಡೆ ಮೋಡಕವಿದ ವಾತಾವರಣ ಮುಂದುವರಿದೆ.
ಕರಾವಳಿಯಲ್ಲಿ ತಾಪಮಾನ ಹೆಚ್ಚಿದ್ದು, ಮಂಗಳವಾರವೂ ಬಿಸಿಲಿನ ಪ್ರಖರತೆ ಅತೀ ಹೆಚ್ಚಾಗಿತ್ತು. ಇನ್ನು ಕಡಬ , ಸುಳ್ಯ ತಾಲೂಕಿನ ಅಲ್ಲಲ್ಲಿ ಮಂಗಳವಾರ ಸಂಜೆ ಮಳೆಯಾಗಿದೆ. ಅಂಗಳದಲ್ಲಿದ್ದ ಅಡಿಕೆಯೂ ಒಣಗುವ ಹಂತದಲ್ಲಿರುವಾಗಲೇ ಮಳೆ ಸುರಿದಿದ್ದರಿಂದ ಕೃಷಿಕರು ಪರದಾಡುವಂತಾಗಿದೆ