ಮಂಗಳೂರು, ಡಿ 18 (MSP): ಕರಾವಳಿಯ ಬಹುತೇಕ ಕಡೆ ಸೋಮವಾರ ದಿನವಿಡಿ ಮೋಡದ ವಾತಾವರಣವಿದ್ದು, ಇದೇ ವಾತಾವರಣ ಮಂಗಳವಾರವೂ ಮುಂದುವರಿದಿದೆ. ಬೆಳಗ್ಗಿನ ಹಾಗೂ ರಾತ್ರಿ ವೇಳೆ ಚಳಿ ಹೆಚ್ಚಾಗಿದೆ.
ಆಂಧ್ರ ಕರಾವಳಿಯಲಿ ದಾಂಧಲೆ ನಡೆಸುತ್ತಿರುವ ಪೆಥಾಯಿ ಚಂಡಮಾರುತ ಮತ್ತು ಅದಕ್ಕೆ ಕಾರ್ಣವಾದ ವಾಯುಭಾರ ಕುಸಿತ ಕರಾವಳಿಯಲ್ಲಿ ಮೋಡ ಕವಿದ ವಾತಾವರಣಕ್ಕೆ ಕಾರ್ಣ ಎಂದು ಹವಮಾನ ಇಲಾಖೆ ಹೇಳಿದೆ. ವಾಯುಭಾರ ಕುಸಿತದಿಂದ ದಕ್ಷಿಣ ಒಳನಾಡಿನಲ್ಲಿ ಮುಂದಿನ ಎರಡು ದಿನಗಳ ಕಾಲ ಅಲ್ಲಲ್ಲಿ ಲಘು ಮಳೆಯಾಗುವ ಸಂಭವಿದ್ದರೆ ಕರಾವಳಿಯಲ್ಲಿ ಮೋಡದ ವಾತಾವರಣ ಮೂರ್ನಾಲ್ಕು ದಿನ ಇರಲಿದೆ ಎಂದೂ ಇಲಾಖೆ ಮುನ್ಸೂಚನೆ ನೀಡಿದೆ.