ಮಂಗಳೂರು, ಮಾ. 08 (DaijiworldNews/SM): ತಂತ್ರಜ್ಞಾನ ಬೆಳೆದಂತೆ ಹಲವಾರು ಲೋನ್ ಆಪ್ಗಳು ಚಾಲ್ತಿಯಲ್ಲಿದೆ. ಆದರೆ, ಯಾರೂ ಕೂಡ ಅವುಗಳ ಮೂಲಕ ಸಾಲ ಪಡೆಯಬಾರದು ಎಂದು ಮಂಗಳೂರು ನಗರ ಕಾನೂನು ಸುವ್ಯವಸ್ಥೆ ಡಿಸಿಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.
img src=https://daijiworld.ap-south-1.linodeobjects.com/Linode/img_tv247/santhu-08.03.2022-hariram.jpg>
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಈಗಾಗಲೇ ಸಾಲ ಪಡೆದು ಕಿರುಕುಳ ಅನುಭವಿಸುತ್ತಿದ್ದರೆ, ಸಿಮ್ ಕಾರ್ಡ್ ಬದಲಾಯಿಸಿ ಎಂದು ಅವರು ಸಲಹೆ ನೀಡಿದ್ದಾರೆ. ಇನ್ನು ಹೊಸ ನಂಬರನ್ನು ತೀರಾ ಆಪ್ತರಿಗೆ ಮಾತ್ರ ನೀಡಬೇಕು. ದುಡುಕಿ ಅನಾಹುತ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಅವರು ವಿನಂತಿಸಿಕೊಂಡಿದ್ದಾರೆ.
ಎಡಿಟ್ ಮಾಡಿದ ಫೊಟೋ, ಬೆದರಿಕೆಯ ಸಂದೇಶಗಳನ್ನು ನಿರ್ಲಕ್ಷಿಸಬೇಕು. ಹಾಗೂ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರೆ ಕಾನೂನು ಪ್ರಕ್ರಿಯೆಗೆ ಅನುಕೂಲವಾಗುತ್ತದೆ. ಇನ್ನು ಮಾಹಿತಿ ನೀಡಿದವರ ಮಾಹಿತಿಯನ್ನು ಗೌಪ್ಯವಾಗಿಡುತ್ತೇವೆ. ಈಗಾಗಲೇ ಕೆಲವು ಲೋನ್ ಆಪ್ಗಳನ್ನು ಸರಕಾರ ನಿಷೇಧಿಸಿದೆ ಎಂದು
ಮಂಗಳೂರು ಡಿಸಿಪಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.