ಬೆಳ್ತಂಗಡಿ, ಮಾ 08 (DaijiworldNews/HR): ಮಂಡಲ ಆರ್ಟ್ ಕಲಾವಿದೆ ಸುರಕ್ಷಾ ಆಚಾರ್ಯಳ ಮಂಡಲ ಆರ್ಟ್ ಗೆ ಇದೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್ ಒಲಿದಿದೆ.
ಸುರಕ್ಷಾ ಬಿಡಿಸಿರುವಂತಹ ಮಂಡಲ ಆರ್ಟ್ ಇಂಡಿಯಾ ಬುಕ್ ಆಫ್ ರೆಕಾರ್ಡ್ ನ ಅತೀ ಸಣ್ಣ ಮಂಡಲ ಆರ್ಟ್ ಎಂಬ ಖ್ಯಾತಿಗೆ ಪಾತ್ರವಾಗಿದೆ. 4ಸೆ.ಮೀ ಅಳತೆಯ ವುಡನ್ ಮೇಲೆ ಬಿಡಿಸಿರುವ ಸುಂದರ ಮಂಡಲ ಆರ್ಟ್ ಈ ದಾಖಲೆಯನ್ನು ಮಾಡಿರುವ ಮಂಡಲ್ ಆರ್ಟ್ ಆಗಿದೆ.
ಸುರಕ್ಷಾ ಆಚಾರ್ಯ ಬೆಳ್ತಂಗಡಿಯ ಕನ್ನಾಜೆ ನಿವಾಸಿ ಚಂದ್ರಶೇಖರ್ ಆಚಾರ್ಯ ಹಾಗೂ ಸರಸ್ವತಿ ದಂಪತಿಗಳ ಪುತ್ರಿಯಾಗಿದ್ದಾರೆ. ಹವ್ಯಾಸಿ ಯಕ್ಷಗಾನ ಕಲಾವಿದೆಯಾಗಿರುವ ಈಕೆ ಹಲವಾರು ಮಹಿಳಾ ಯಕ್ಷಗಾನಗಳಲ್ಲಿ ತನ್ನ ಕಲಾ ಪ್ರಖರತೆಯನ್ನು ಮೆರೆದಿದ್ದಾಳೆ.
ಇನ್ನು ಲೀಫ್ ಆರ್ಟ್, ಪೆನ್ಸಿಲ್ ಆರ್ಟ್ ಗಳನ್ನೂ ಮಾಡುವ ಈಕೆ ಭಜನಾ ತಂಡದಲ್ಲೂ ಕೂಡಾ ತನ್ನನ್ನು ತಾನು ತೊಡಗಿಸಿಕೊಂಡಿದ್ದಾಳೆ. ಹಲವಾರು ಮಂಡಲ ಆರ್ಟ್ ಗಳನ್ನು ಬಿಡಿಸುವ ಮೂಲಕ ಗಮನ ಸೆಳೆದಿದ್ದ ಸುರಕ್ಷಾ ಆಚಾರ್ಯ ಇದೀಗ ಆಕೆಯ ಕಲಾ ನೈಪುಣ್ಯತೆ "ಇಂಡಿಯಾ ಬುಕ್ ಆಫ್ ರೆಕಾರ್ಡ್"ನಲ್ಲಿ ಸೇರಿಕೊಂಡಿದೆ.