ಉಡುಪಿ, ಮಾ 08 (DaijiworldNews/DB): ಸ್ಕೂಟರ್ ನಲ್ಲಿ ರಸ್ತೆ ದಾಟುತ್ತಿದ್ದ ಮಹಿಳೆಗೆ ಹಾಲಿನ ಟೆಂಪೋ ಢಿಕ್ಕಿಯಾದ ಘಟನೆ ಉಡುಪಿಯ ಪೆರಂಪಳ್ಳಿ-ಮಣಿಪಾಲ ಮುಖ್ಯರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಅದೃಷ್ಟವಶಾತ್ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಿಂದಿನಿಂದ ಹಾಲಿನ ವಾಹನ ಬರುತ್ತಿರುವುದನ್ನು ಗಮನಿಸದೆ ರಸ್ತೆಯ ಇನ್ನೊಂದು ಭಾಗಕ್ಕೆ ಸ್ಕೂಟರ್ ನ್ನು ತಿರುಗಿಸಿ ಸಂಚರಿಸುತ್ತಿದ್ದರು. ಈ ವೇಳೆ ಹಾಲಿನ ಟೆಂಪೋ ಢಿಕ್ಕಿಯಾಗಿದ್ದು, ಢಿಕ್ಕಿಯ ರಭಸಕ್ಕೆ ಮಹಿಳೆ ರಸ್ತೆ ಮೇಲೆ ಬಿದ್ದಿದ್ದಾರೆ. ಆದರೆ ಯಾವುದೇ ತೀವ್ರ ತರದ ಗಾಯಗಳಿಲ್ಲದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತತ್ ಕ್ಷಣವೇ ಸ್ಥಳದಲ್ಲಿದ್ದ ಬಸ್ ಸಿಬಂದಿ, ಸಾರ್ವಜನಿಕರು ಮಹಿಳೆಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ.