ಮೂಡುಬಿದಿರೆ,ಡಿ 18 (MSP): ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಷಷ್ಠಿ ಜಾತ್ರಾ ಮಹೋತ್ಸವದ ವಿಸರ್ಜನ ಪ್ರಕ್ರಿಯೆಗಳೆಲ್ಲ ಮುಗಿದ ಬಳಿಕ ಸೋಮವಾರ ನಡೆದ ಧ್ವಜಾವರೋಹಣದ ಸಂದರ್ಭ ಧ್ವಜಸ್ಥಂಭದ ರಾಟೆ ಕಳಚಿ, ಗರುಡ, ಕಿರುಗಂಟೆ ಕೆಳಗೆ ಬಿದ್ದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ. ಘಟನೆ ಸಂದರ್ಭ ಯಾವುದೇ ಅಪಾಯ ಉಂಟಾಗಿಲ್ಲ, ಪ್ರಾಯಶ್ಚಿತ ವಿಧಿಯಾಗಿ ದೇವರಿಗೆ 48 ಕಲಶ ಅಭಿಷೇಕ ಮಾಡಲಾಯಿತು.
ಕಳೆದ 19 ವರ್ಷಗಳಿಂದ ಕಡಂದಲೆ ಕ್ಷೇತ್ರದಲ್ಲಿ ಬ್ರಹ್ಮಕಲಶ ನಡೆದಿದ್ದು, ಷಷ್ಠಿ ಸಂದರ್ಭದಲ್ಲಿ, ಧೂಮವತಿ ದೈವವು, ಇದನ್ನು ಪ್ರಸ್ತಾಪಿಸಿ, ಯೋಜನೆ ಮಾಡುವಂತೆ ತಿಳಿಸಿತ್ತು ಎನ್ನಲಾಗಿದೆ. ಸೋಮವಾರ ನಡೆದ ಘಟನೆಯಿಂದ ಎಚ್ಚೆತ್ತುಕೊಂಡಿರುವ ಕ್ಷೇತ್ರದ ವ್ಯವಸ್ಥಾಪನ ಸಮಿತಿ, ಬ್ರಹ್ಮಕಲಶದ ಬಗ್ಗೆ ಚಿಂತನೆ ನಡೆಸಿದೆ.