ಉಡುಪಿ, ಮಾ 07 (DaijiworldNews/MS): ಗ್ರಾಹಕರು ಖರೀದಿಸುವ ಎಲೆಕ್ಟ್ರಾನಿಕ್ ಉತ್ಪನ್ನಗಳಿಗೆ ಸುರಕ್ಷೆಯ ಖಾತ್ರಿ ಒದಗಿಸುವ 'ಆನ್ ಸೈಟ್ ಗೊ" ಯೋಜನೆಯನ್ನು ಗೃಹಪಯೋಗಿ ಉತ್ಪನ್ನಗಳ ಪ್ರಖ್ಯಾತ ಮಳಿಗೆ 'ಹರ್ಷ' ಮಂಗಳೂರು ಮಳಿಗೆಯಲ್ಲಿ ಉದಯೋನ್ಮುಖ ಸ್ಯಾಂಡಲ್ ವುಡ್ ನಟಿ ನಿಮಿಕಾ ರತ್ನಾಕರ್ ಬಿಡುಗಡೆಗೊಳಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಅವರು "ರಾಜ್ಯಾದ್ಯಂತ ಮನೆಮಾತಾಗಿರುವ ಹರ್ಷ ಮಳಿಗೆ ಹೆಸರಾಂತ ಕಂಪನಿಗಳ ನವನವೀನ ಮತ್ತು ಅತ್ಯಾಧುನಿಕ ಉತ್ಪನ್ನಗಳನ್ನು ಪರಿಚಯಿಸುತ್ತಾ ಬಂದಿದ್ದು ಇದೀಗ ಎಲೆಕ್ಟ್ರಾನಿಕ್ ಉತ್ಪನ್ನಗಳಿಗೆ ಸಂಪೂರ್ಣ ಸುರಕ್ಷೆಯನ್ನು ಒದಗಿಸುವ 'ಆನ್ ಸುಟ್ ಗೋ' ಯೋಜನೆಯನ್ನು ಪರಿಚಯಿಸಿರುವುದು ಸಂತೋಷದಾಯಕ" ಎಂದರು.
"ಆನ್ ಸೈಟ್ ಗೊ" ಯೋಜನೆಯು ಗ್ರಾಹಕರು ಖರೀದಿಸಿದ ಎಲೆಕ್ಟ್ರಾನಿಕ್ ಉತ್ಪನ್ನಗಳಿಗೆ ಸಂಪೂರ್ಣ ಸುರಕ್ಷೆಯನ್ನು ನೀಡುತ್ತದೆ. ಗ್ರಾಹಕರು ಖರೀದಿಸುವ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಿಗೆ ಸಾಮಾನ್ಯವಾಗಿ ಕಂಪನಿಗಳು ವಾರಂಟಿಯನ್ನು ನೀಡುತ್ತವೆ. ಆದರೆ ಕೆಲವೊಂದು ಹಾನಿಗಳು ವಾರಂಟಿಯಲ್ಲಿ ಒಳಗೊಳ್ಳುವುದಿಲ್ಲ. ಆನ್ ಸೈಟ್ ಗೊ ದಲ್ಲಿ ಎಲ್ಲಾ ಹಾನಿಗಳು ಒಳಗೊಂಡು ಗ್ರಾಹಕರ ಉತ್ಪನ್ನಗಳಿಗೆ ಹೆಚ್ಚುವರಿಯಾಗಿ ಈ ವಾರಂಟಿ ಲಬಿಸುತ್ತದೆ.
ಆನ್ ಸೈಟ್ ಗೋ ಸಂಸ್ತೆಯ ಉಪಾಧ್ಯಕ್ಷ (ವಾಣಿಜ್ಯ ಮತ್ತು ನಿರ್ವಹಣೆ ವಿಭಾಗ) ಮನೀಶ್ ಕುಮಾರ್ ಮಲ್ಹೋತ್ರಾ ಮಾತನಾಡಿ "ಆನ್ ಸೈಟ್ ಗೋ" ಉತ್ಪನ್ನವನ್ನು ಹರ್ಷ ಮಳಿಗೆಯಲ್ಲಿ ಬಿಡುಗೆಡ ಮಾಡಲು ಅತೀವ ಸಂತಸವಾಗುತ್ತಿದೆ. ಆನ್ ಸೈಟ್ ಗೋ ಈಗಾಗಲೇ ದೇಶಾದ್ಯಂತ ಜನಪ್ರಿಯತೆ ಪಡೆದಿದೆ ಎಂದರು.
"ಹರ್ಷ" ಸಂಸ್ಥೆಯ ಆಪರೇಶನ್ ಹೆಡ್ ಸಿದ್ದಾರ್ಥ ಪ್ರಭು ಮಾತನಾಡಿ "ಗುಣಮಟ್ಟದ ಸೇವೆ, ಗ್ರಾಹಕರ ಸಂತೃತ್ತಿ ಹರ್ಷದ ಧ್ಯೇಯ. ಇದೀಗ ಆನ್ ಸೈಟ್ ಗೋ ಉತ್ಪನ್ನದ ಮೂಲಕ ಗ್ರಾಹಕರಿಗೆ ಇನ್ನಷ್ಟು ಹೆಚ್ಚಿನ ಸೇವೆ ನೀಡಲು ಸಾಧ್ಯವಾಗಲಿದೆ ಎಂದರು.
ಆನ್ ಸೈಟ್ ಗೋ ರಿಜನಲ್ ಹೆಡ್ ಅನಂತ ರಾಮನ್, ಸ್ಟೇಟ್ ಹೆಡ್ ಶಶಿಧರ್ ಶೇಟ್ ಉಪಸ್ಥಿತರಿದ್ದರು. ಹರ್ಷದ ಕ್ಲಸ್ಟರ್ ಮ್ಯಾನೇಜರ್ ರಿತೇಶ್ ದಾಸ್ ವಂದಿಸಿದರು. ಸೌಜನ್ಯಾ ಹೆಗ್ಡೆ ನಿರೂಪಿಸಿದರು.