ಉಡುಪಿ, ಡಿ 17(SM): ಮೀನುಗಾರಿಕೆ ಮುಗಿಸಿ ಲಂಗರು ಹಾಕಿದ್ದ ಬೋಟಿನಲ್ಲಿ ಇಬ್ಬರು ಕಾರ್ಮಿಕರು ಹೊಡೆದಾಡಿಕೊಂಡು ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಮಲ್ಪೆ ಬಾಪುತೋಟ ಎಂಬಲ್ಲಿ ನಡೆದಿದೆ. ಛತ್ತೀಸ್ಘಡ್ ಮೂಲದ ಪ್ರಿತಂ ಹತ್ಯೆಯಾದಾತ.
ಕಟಪಾಡಿಯ ದತ್ತರಾಜ್ ಮಾಲಕತ್ವದ ಬೋಟ್ ರವಿವಾರ ಮೀನಿಗಾರಿಕೆ ಮುಗಿಸಿ ಮಲ್ಪೆ ಬಾಪುತೋಟ ಎಂಬಲ್ಲಿ ಲಂಗರು ಹಾಕಿತ್ತು. ಈ ಸಂದರ್ಭ ಮೂವರು ಕಾರ್ಮಿಕರು ಕೆಲಸ ಮುಗಿಸಿ ಮನೆಗೆ ತೆರಳಿದ್ದರು. ಉಳಿದ ಕಾರ್ಮಿಕರಾದ ಛತ್ತೀಸ್ಘಡ್ ದ ಪ್ರಿತಂ ಹಾಗೂ ಕೊಪ್ಪಳದ ಮಾರುತಿ ಎಂಬಾತ ಬೋಟ್ ನಲ್ಲೆ ಉಳಿದು ಕೊಂಡಿದ್ದರು. ರಾತ್ರಿ ಕುಡಿದು ಇಬ್ಬರಿಗೆ ಯಾವುದೋ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ.
ಈ ವೇಳೆ ಕೋಪಗೊಂಡ ಮಾರುತಿ, ಪ್ರೀತಂ ತಲೆಗೆ ಮೀನುಗಾರಿಕೆಗೆ ಉಪಯೋಗಿಸುವ ಆಯುಧದಿಂದ ಹೊಡೆದು ಕೊಲೆ ಮಾಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ. ಇಂದು ಬೋಟ್ ನ ಮಾಲಕ ದತ್ತರಾಜ್ ಬಾಪುತೋಟಕ್ಕೆ ಬಂದಾಗ ಅಲ್ಲಿದ್ದ ಮಾರುತಿ ಮಾಲೀಕರನ್ನು ಕಂಡು ಪರಾರಿಯಾಗಿದ್ದಾನೆ. ಈ ವೇಳೆ ಘಟನೆ ಬೆಳಕಿಗೆ ಬಂದಿದೆ.
ಮಲ್ಪೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.