ಕಾಸರಗೋಡು, ಮಾ 07 (DaijiworldNews/MS): ಪೆರ್ಮುದೆ ಸಂತ ಲೋರೆನ್ಸ್ ಚರ್ಚ್ ನ ಧರ್ಮಗುರು ಫಾದರ್ ಮೆಲ್ವಿನ್ ಫೆರ್ನಾಂಡೀಸ್ ರವರ 50 ನೇ ಜನ್ಮದಿನ ಹಾಗೂ ಗುರುಧೀಕ್ಷೆಯ 20ನೇ ವಾರ್ಷಿಕೋತ್ಸವನ್ನು ಮಾ.6ರ ಭಾನುವಾರದಂದು ಆಚರಿಸಲಾಯಿತು.
ಬೆಳಿಗ್ಗೆ ನಡೆದ ಬಲಿಪೂಜೆಯನ್ನು ಫಾದರ್ ಮೆಲ್ವಿನ್ ಫೆರ್ನಾಂಡಿಸ್ ನೆರವೇರಿಸಿದರು. ಬೇಳ ಶೋಕಮಾತಾ ಪುಣ್ಯಕ್ಷೇತ್ರದ ಧರ್ಮಗುರು ಫಾದರ್ ಸ್ಟ್ಯಾನಿ ಪಿರೇರಾ , ಫಾದರ್ ಕ್ಲೋಡ್ ಕೋರ್ಡ, ಸುಪೀರಿಯರ್ ಫಾದರ್ ರೆಜಿನಾಲ್ಡ್ ಡಿ ಮೆಲ್ಲೊ ಹಾಗೂ ಇನ್ನಿತರ ಧರ್ಮಗುರು ಉಪಸ್ಥಿತರಿದ್ದರು. ಬಳಿಕ ಚರ್ಚ್ ವಠಾರದಲ್ಲಿ ನಡೆದ ಸಮಾರಂಭದಲ್ಲಿ ಫಾದರ್ ಮೆಲ್ವಿನ್ ಫೆರ್ನಾಂಡಿಸ್’ರವರನ್ನು ಗೌರವಿಸಲಾಯಿತು.
ಸಮಾರಂಭದಲ್ಲಿ ಫಾದರ್ ಸ್ಟ್ಯಾನಿ ಪಿರೇರಾ , ಫಾದರ್ ರೆಜಿನಾಲ್ಡ್ ಡಿ ಮೆಲ್ಲೊ , ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಸಿಪ್ರಿಯಾನ್ ಡಿ ಸೋಜ , ಕಾರ್ಯದರ್ಶಿ ಜೋನ್ ಡಿ ಸೋಜ , ಫಾದರ್ ಮೆಲ್ವಿನ್ ಫೆರ್ನಾಂಡಿಸ್ ರವರ ತಾಯಿ ಹಿಲ್ಡಾ ಫೆರ್ನಾಂಡಿಸ್ , ರೊನಾಲ್ಡ್ ಫೆರ್ನಾಂಡಿಸ್ , ಕ್ಷೇವಿಯರ್ ಮಥಾಯಸ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಹಾಯಕ ಧರ್ಮಗುರು ಫಾದರ್ ಪೀಟರ್ ಫೆರ್ನಾಂಡಿಸ್ , ಫಾದರ್ ಅರುಣ್ ಡಿ ಸೋಜ, ಕಯ್ಯಾರ್ ಕ್ರಿಸ್ತರಾಜ ದೇವಾಲಯದ ಧರ್ಮಗುರು ಫಾದರ್ ಹ್ಯಾರಿ ಡಿ ಸೋಜ , ನಾರಂಪಾಡಿ ಚರ್ಚ್ ಧರ್ಮಗುರು ಜೆ . ಬಿ ಮೊರಾಸ್ , ಬೋವಿಕ್ಕಾನ ಚರ್ಚ್ ನ ಧರ್ಮಗುರು ಫಾದರ್ ಸ್ಟ್ಯಾನಿ ಡಿ ಸೋಜ , ವರ್ಕಾಡಿ ಸೇಕ್ರೆಡ್ ಹಾರ್ಟ್ ಚರ್ಚ್ ನ ಫಾದರ್ ಫ್ರಾನ್ಸಿಸ್ ರೊಡ್ರಿ ಗಸ್ ಹಾಗೂ ಇನ್ನಿತರ ಧರ್ಮಗುರುಗಳು ಉಪಸ್ಥಿತರಿದ್ದರು. ಫಾದರ್ ಪೀಟರ್ ಫೆರ್ನಾಂಡಿಸ್ ಸ್ವಾಗತಿಸಿದರು. ಫಾದರ್ ಪ್ರವೀಣ್ ಮೊಂತೆರೋ ಕಾರ್ಯಕ್ರಮ ನಿರೂಪಿಸಿದರು . ಜೋನ್ ಡಿ ಸೋಜ ವಂದಿಸಿದರು.