ಮಂಗಳೂರು,ಡಿ 17 (MSP): ನಗರದ ಆಶೋಕ ನಗರ ಶಾಲೆ ಬಳಿಯ ನಿವಾಸಿ ಯಶವಂತಿ(38) ಶನಿವಾರ ಮಧ್ಯಾಹ್ನ ಮೈಗೆ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಾರೆ.
ಅವಿವಾಹಿತರಾಗಿದ್ದ ಅವರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಮನೆಯಲ್ಲಿ ತಾಯಿ ಮಾತ್ರ ಇದ್ದು,ಶನಿವಾರ ಸುಮಾರು 11 ಗಂಟೆ ವೇಳೆಗೆ ಯಶವಂತಿ ತನ್ನ ಕೊಠಡಿಗೆ ತೆರಳಿ ಧರಿಸಿದ್ದ ಬಟ್ಟೆಗಳಿಗೆ ಬೆಂಕಿ ಹಚ್ಚಿದ್ದರು. ಬೊಬ್ಬೆ ಹಾಕಿದಾಗ ತಾಯಿ ಆಸುಪಾಸಿನ ಜನರನ್ನು ಕರೆಯಿಸಿ ಬೆಂಕಿ ಆರಿಸಿ ಆಸ್ಪತೆಗೆ ದಾಖಲಿಸಿದ್ದರು.
ಆದರೆ ಅವರು ಚಿಕಿತ್ಸೆಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಉರ್ವ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ.