ಮಂಗಳೂರು,ಡಿ 17 (MSP): ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ನೇತೃತ್ವದಲ್ಲಿ ತೃತೀಯ ವರ್ಷದ ಭಾವೈಕ್ಯ ಕ್ರಿಸ್ ಮಸ್ ಸಂಭ್ರಮಾಚರಣೆ ಡಿ.23 ರಂದು ಅಪರಾಹ್ನ 3.30 ರಿಂದ ಕಂಕನಾಡಿ ಮಾರುಕತ್ಟೆಯ ಸಾರ್ವಜನಿಕ ಮೈದಾನದಲ್ಲಿ ನಡೆಯಲಿದೆ. ಹಬ್ಬದ ಪ್ರಯುಕ್ತ ನಾಡಿನ ಸರ್ವಧರ್ಮದವರನ್ನು ಒಗ್ಗೂಡಿಸುವುದೇ ಈ ಕಾರ್ಯಕ್ರಮದ ಉದ್ದೇಶ.ಅದಕ್ಕಾಗಿ 80 ಸದಸ್ಯರ ಸಮಿತಿ ರಚನೆ ಮಾಡಲಾಗಿದೆ.
ಸಮಾರಂಭದಲ್ಲಿ ವಿಶೇಷವಾಗಿ ಒಂದು ಸಾವಿರ ವಿತರಿಸಲಾಗುವುದು ಎಂದು ಐವನ್ ಡಿ ಸೋಜಾ ಶನಿವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ. ಕ್ರಿಸ್ ಮಸ್ ಹಬ್ಬದ ಸಂದೇಶ ಸಾರುವ ಕ್ಯಾರಲ್, ನಕ್ಷತ್ರ ಸ್ವರ್ಧೆ, ಕ್ರಿಸ್ ಮಸ್ ಕೇಕ್ ಪ್ರದರ್ಶನ ಹಾಗೂ ಸ್ವರ್ಧೆ, ಸಾಂತಾಕ್ಲಾಸ್ ಸ್ವರ್ಧೆ ನಡೆಯಲಿದೆ. ಮಧ್ಯಾಹ್ನ 3.30 ಕ್ಕೆ ಕ್ರಿಸ್ ಮಸ್ ಕ್ಯಾರಲ್ ಸಂಗೀತ ಸ್ವರ್ಧೆಗೆ ಮಾಜಿ ಶಾಸಕ ಜೆ.ಆರ್ ಲೋಬೋ ಚಾಲನೆ ನೀಡಲಿದ್ದಾರೆ. ಕೇಕ್ ಸ್ವರ್ದೆಗೆ ಪ್ರದೀಪ್ ಕುಮಾರ್ ಕಲ್ಕೂರ, ನಕ್ಷತ್ರ ಸ್ವರ್ಧೆಗೆರ್ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನವೀನ್ ಡಿ’ಸೋಜಾ , ಸಾಂತಾಕ್ಲಾಸ್ ಸ್ವರ್ಧೆಗೆ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಚಾಲನೆ ನೀಡಲಿದ್ದಾರೆ ಸಂಜೆ 6.30 ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ಭಾಗವಹಿಸಲಿದ್ದಾರೆ.