ಕಾರ್ಕಳ, ಮಾ 02 (DaijiworldNews/MS): ಅಜೆಕಾರು ಸಮೀಪದ ಅಂಡಾರು ಎಂಬಲ್ಲಿನ ಮನೆಯೊಂದರಲ್ಲಿ ಒಂಟಿಯಾಗಿ ಜೀವನ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆಗೈದಿದ್ದಾರೆ.
ಭೋಜ ಶೆಟ್ಟಿ (60) ಬದುಕಿಗೆ ಅಂತ್ಯ ಹೇಳಿದರು. ಕಳೆದ 8 ವರ್ಷಗಳಿಂದ ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದ ಅವರು ವಿಪರೀತ ಮದ್ಯ ಸೇವನೆಗೈಯುತ್ತಿದ್ದರು. ಇದಲ್ಲದೆ ಮಾನಸಿಕವಾಗಿ ನೊಂದುಕೊಂಡಿದ್ದ ಮರದ ಕೊಂಬೆಗೆ ನೈಲಾನ್ ಹಗ್ಗ ಕಟ್ಟಿ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಅಜೆಕಾರು ಠಾಣೆಯಲ್ಲಿ ಕೇಸುದಾಖಲಾಗಿದೆ.