ಉತ್ತರ ಕನ್ನಡ, ಮಾ.01 (DaijiworldNews/SM): ಎಟಿಎಂ ಕಾರ್ಡ್ ಬಳಸಿಕೊಂಡು ವಂಚಿಸುತ್ತಿದ್ದ ಅಂತರಾಜ್ಯ ವಂಚಕನನ್ನು ಡಿವೈಎಸ್ ಪಿ ವೆಲೆಂಟೈನ್ ನೇತೃತ್ವದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಉಪವಿಭಾಗದ ಅಂಕೋಲಾ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿರುವ ಘಟನೆ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಶಾಂತಿನಗರದ ಡ್ರೈವರ್ ವೃತ್ತಿಯಲ್ಲಿದ್ದ ವಿಜಯ್(34) ಬಂಧಿತ ಆರೋಪಿಯಾಗಿದ್ದಾನೆ. ಬಂಧಿತ ಆರೋಪಿಯಿಂದ 42 ಸಾವಿರ ನಗದು ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ಪೊಲೀಸರು ಬಂಧಿಸಿದ್ದಾರೆ. 2021ರ ಡಿಸೆಂಬರ್ ತಿಂಗಳ 21ರಂದು ಅಂಕೋಲಾ ಠಾಣಾ ವ್ಯಾಪ್ತಿಯ ಬೋಳೆಯ ನಿವಾಸಿ ಕೆ.ಸಿ ರಸ್ತೆಯಲ್ಲಿನ ಎಸ್ ಬಿಐ ಎಟಿಎಂ ನಿಂದ ಹಣ ಡ್ರಾ ಮಾಡಲು ತೆರಳಿದ್ದ. ಬಳಿಕ ಅಲ್ಲಿಗೆ ಬಂದಿದ್ದ ಅಪರಿಚಿತ ವ್ಯಕ್ತಿಯೋರ್ವ ಆ ವ್ಯಕ್ತಿಯನ್ನು ಯಾಮಾರಿಸಿಕೊಂಡು ಅವರ ಬಳಿಯಿದ್ದ ಎಟಿಎಂ ಕಾರ್ಡ್ ನ್ನು ಪಡೆದು ತದನಂತರ ಬೇರೆ ಬ್ಯಾಂಕ್ ಎಟಿಎಂ ಮೂಲಕ 44,000ರೂಪಾಯಿ ಡ್ರಾ ಮಾಡಿ ವಂಚಿಸಿದ್ದಾರೆ.
ಈ ಬಗ್ಗೆ ಆ ವ್ಯಕ್ತಿ ಪ್ರಕರಣ ದಾಖಲಿಸಿದ್ದು, ನಿರಂತರ ಶೋಧದ ಬಳಿಕ ಮುಂಬೈನ ಕುರ್ಲಾದ ಸಾಕಿನಾಕಾದಿಂದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.